ರೌಡಿಶೀಟರ್ ರವಿ ಬಂಧನ ಪ್ರಕರಣ: ಇಬ್ಬರಿಗಾಗಿ ಶೋಧ
ಬೆಂಗಳೂರು, ಜು.11: ರೌಡಿಶೀಟರ್ ಸೈಕಲ್ ರವಿ ಬಂಧನ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಿಸಿಬಿ ಪೊಲೀಸರು, ಆರೋಪಿಯ ಸಹೋದರ ಮಹೇಶ್ ಸೇರಿ ಸಹಚರನೊಬ್ಬನ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಅಪರಾಧ ಕೃತ್ಯಗಳಿಗೆ ಬರೋಬ್ಬರಿ 11ಕ್ಕೂ ಹೆಚ್ಚು ಮೊಬೈಲ್ಗಳನ್ನು ಬಳಸುತ್ತಿದ್ದ ರೌಡಿ ರವಿ, 30ಕ್ಕೂ ಹೆಚ್ಚು ಸಿಮ್ಗಳನ್ನು ಖರೀದಿಸಿದ್ದು, ಅದರಲ್ಲಿ ಬಹುತೇಕ ಸಿಮ್ಗಳಿಗೆ ಸಹೋದರ ಮಹೇಶ್ನ ವಿಳಾಸ ಹೆಸರು ನೀಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾಧಿಕಾರಿಗಳು ಮಹೇಶ್ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ರವಿಯ ಮೇಲೆ ಗುಂಡಿನ ದಾಳಿಯಾದ ದಿನದಂದು ಆತನ ಕಾರಿನಲ್ಲಿದ್ದ ಎಲ್ಲ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಿಮ್ಗಳನ್ನು ಖರೀದಿಸಲು ಆತ ಬೆಂಗಳೂರಿನ ರಾಣಾಸಿಂಗ್ ಪೇಟೆಯ ಫ್ಲವರ್ಗಾರ್ಡನ್ನ ಮನೆಯೊಂದರ ವಿಳಾಸವನ್ನು ನೀಡಿದ್ದಾನೆ ಎಂದು ಗೊತ್ತಾಗಿದೆ.
Next Story