14ರ ಬಾಲಕಿ ಮೇಲೆ 24 ಗಂಟೆಯೊಳಗೆ ಎರಡು ಬಾರಿ ಅತ್ಯಾಚಾರ

ಛಿಂದ್ವಾರ (ಮಧ್ಯಪ್ರದೇಶ), ಜು. 11: ಹದಿನಾಲ್ಕು ವರ್ಷದ ಬಾಲಕಿಯ ಮೇಲೆ 24 ಗಂಟೆಯಲ್ಲಿ ಎರಡು ಬಾರಿ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ 5 ಮಂದಿಯನ್ನು ಬಂಧಿಸಲಾಗಿದೆ. ಜುಲೈ 6ರಂದು ಬಾಲಕಿ ಮನೆಯಿಂದ ತೆರಳಿದ್ದಾರೆ. ಆಕೆ ಮನೆಗೆ ಹಿಂದಿರುಗದೇ ಇದ್ದಾಗ ಮರುದಿನ ಕುಂದಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನೀರಜ್ ಸೋನಿ ತಿಳಿಸಿದ್ದಾರೆ.
ಜುಲೈ 8ರಂದು ಮೌವಾ ತೋಲಾ ಪ್ರದೇಶದಲ್ಲಿ ಬಾಲಕಿ ಅವ್ಯವಸ್ಥಿತವಾಗಿ ಅಲೆಯುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದರು ಎಂದು ಅವರು ತಿಳಿಸಿದ್ದಾರೆ.
ಮೋಹಿತ್ ಭಾರದ್ವಾಜ್ (22) ನನ್ನನ್ನು ಪುಸಲಾಯಿಸಿ ಬೈಕ್‌ನಲ್ಲಿ ಆತನ ಸ್ನೇಹಿತ ರಾಹುಲ್ ಭೋಂಡೆ (24) ಮನೆಗೆ ಕರೆದೊಯ್ದ. ಅಲ್ಲಿ ಅವರಿಬ್ಬರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ. ಮರು ದಿನ ಅವರಿಬ್ಬರು ತನಗೆ ತೆರಳಲು ಅವಕಾಶ ನೀಡಿದರು. ತಾನು ಮನೆಗೆ ಹಿಂದಿರುಗುತ್ತಿದ್ದಂತೆ ಬಂಟಿ ಭಾಲವಿ (23), ಅಂಕಿತ್ ರಘವಂಶಿ (25) ಹಾಗೂ ಅಮಿತ್ ವಿಶ್ವಕರ್ಮ (21) ಎಂಬವರು ತನ್ನನ್ನು ಮತ್ತೆ ಭೋಂಡೆ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ತಿಳಿಸಿರುವುದುದಾಗಿ ನೀರಜ್ ಸೋನಿ ಹೇಳಿದ್ದಾರೆ.







