ಗಿನ್ನೆಸ್ ವಿಶ್ವ ದಾಖಲೆಗೆ ಪ್ರಧಾನಿ ಮೋದಿ ಹೆಸರು ಸೂಚಿಸಿದ ಗೋವಾ ಕಾಂಗ್ರೆಸ್!

ಪಣಜಿ, ಜು.11: 'ವಿದೇಶಗಳಿಗೆ ಪ್ರಯಾಣಿಸಿ ವಿಶ್ವದಾಖಲೆ ಬರೆದ" ಕಾರಣಕ್ಕಾಗಿ ನರೇಂದ್ರ ಮೋದಿಯವರ ಹೆಸರನ್ನು ದಾಖಲಿಸಬೇಕು ಎಂದು ಗೋವಾ ಕಾಂಗ್ರೆಸ್ ಗಿನ್ನೆಸ್ ವಿಶ್ವ ದಾಖಲೆಗೆ ಪತ್ರ ಬರೆದಿದೆ ಎನ್ನಲಾಗಿದೆ.
"ವಿಶ್ವದಾಖಲೆಯನ್ನು ನಿರ್ಮಿಸಿದ ಭಾರತದ ಪ್ರಧಾನಮಂತ್ರಿಯ ಹೆಸರನ್ನು ಸೂಚಿಸುವುದಕ್ಕೆ ನಾವು ಸಂತಸಗೊಂಡಿದ್ದೇವೆ. ಅವರು ಭಾರತದ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ ಹಾಗು 4 ವರ್ಷಗಳಲ್ಲಿ 52 ದೇಶಗಳಿಗೆ 41 ಬಾರಿ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ 355 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ" ಎಂದು ಬರೆಯಲಾಗಿರುವ ಪತ್ರವನ್ನು ಕಳುಹಿಸಲಾಗಿದೆ ಎಂದು ಗೋವಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಕಲ್ಪ್ ಅಮೋನ್ಕರ್ ಹೇಳಿದ್ದಾರೆ.
"ಭಾರತದ ಭವಿಷ್ಯದ ಪೀಳಿಗೆಗೆ ಅವರು ರೋಲ್ ಮಾಡೆಲ್ ಆಗಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಜಗತ್ತಿನ ಯಾವೊಬ್ಬ ಪ್ರಧಾನಿಯೂ ದೇಶಗಳನ್ನು ಸುತ್ತಿಲ್ಲ. ಇವರ ಆಡಳಿತಾವಧಿಯಲ್ಲೇ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು 69.03ಕ್ಕೆ ಕುಸಿದಿದೆ" ಎಂದು ಸಂಕಲ್ಪ್ ಹೇಳಿದ್ದಾರೆ.
Next Story





