Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕಗ್ಗತ್ತಲ ಗುಹೆಯಿಂದ ಮಕ್ಕಳನ್ನು...

ಕಗ್ಗತ್ತಲ ಗುಹೆಯಿಂದ ಮಕ್ಕಳನ್ನು ರಕ್ಷಿಸಿದ ಕಾರ್ಯಾಚರಣೆ ನಡೆದದ್ದು ಹೇಗೆ?

ರಕ್ಷಣಾ ತಂಡ ಎದುರಿಸಿದ ಸಂಕಷ್ಟಗಳೇನು?: ಇಲ್ಲಿದೆ ವಿವರ

ವಾರ್ತಾಭಾರತಿವಾರ್ತಾಭಾರತಿ11 July 2018 9:51 PM IST
share
ಕಗ್ಗತ್ತಲ ಗುಹೆಯಿಂದ ಮಕ್ಕಳನ್ನು ರಕ್ಷಿಸಿದ ಕಾರ್ಯಾಚರಣೆ ನಡೆದದ್ದು ಹೇಗೆ?

ಮೇ ಸಾಯ್ (ಥಾಯ್ಲೆಂಡ್), ಜು. 11: ಥಾಯ್ಲೆಂಡ್‌ನ ಎಲ್ಲ ‘ಕಾಡು ಹಂದಿ’ (ಈ ಮಕ್ಕಳು ‘ವೈಲ್ಡ್ ಬೋರ್ಸ್’ ಎನ್ನುವ ಹೆಸರಿನ ಫುಟ್ಬಾಲ್ ತಂಡದ ಸದಸ್ಯರಾಗಿದ್ದಾರೆ)ಗಳನ್ನು ಥಾಮ್ ಲುವಾಂಗ್ ಗುಹೆಯಿಂದ ಹೊರತರುವ ಅಭೂತಪೂರ್ವ ರಕ್ಷಣಾ ಕಾರ್ಯಾಚರಣೆ ಮಂಗಳವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಜೂನ್ 23ರಂದು ಗುಹೆಯ ಒಳಗೆ ಮೋಜಿಗಾಗಿ ಹೋದ ಅವರು ಅಲ್ಲೇ ಬಂಧಿಯಾಗಿದ್ದರು. ಅವರು ಗುಹೆಗೆ ಹೋದ ಬೆನ್ನಲ್ಲೇ ಥಾಯ್ಲೆಂಡ್‌ನಲ್ಲಿ ಮುಂಗಾರು ಮಳೆ ಆರಂಭವಾಗಿತ್ತು. ಭಾರೀ ಮಳೆಯಿಂದಾಗಿ ತಕ್ಷಣ ಪ್ರವಾಹ ಏರಿದ್ದು, ನೀರು ಗುಹೆಗೆ ನುಗ್ಗಿತ್ತು.

    12 ಬಾಲಕರು ಮತ್ತು ಅವರ ಕೋಚ್ 9 ದಿನಗಳ ಕಾಲ ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೆ ಗುಹೆಯಲ್ಲೇ ಕಳೆದಿದ್ದರು. ಜುಲೈ 2ರಂದು ಬ್ರಿಟನ್‌ನ ಮುಳುಗುಗಾರರು ಗುಹೆಯ ತೀರಾ ಒಳಗಿನ ಎತ್ತರದ ಸ್ಥಳವೊಂದರಲ್ಲಿ ಅವರನ್ನು ಪತ್ತೆಹಚ್ಚಿದ್ದರು.

ಅವರನ್ನು ಪ್ರವಾಹದಿಂದ ತುಂಬಿರುವ ಗುಹೆಯಿಂದ ಹೇಗೆ ಹೊರಗೆ ತರುವುದು ಎಂಬ ಜಿಜ್ಞಾಸೆಯಲ್ಲೇ ಒಂದು ವಾರ ಕಳೆಯಿತು. ಮತ್ತೆ ಮಳೆ ಸುರಿದರೆ ಅಪಾಯ ಖಚಿತ ಎಂಬುದನ್ನು ಮನಗಂಡ ರಕ್ಷಣಾ ತಂಡವು, ನೀರಿನಡಿಯಲ್ಲೇ ಅವರನ್ನು ಹೊರಗೆ ತರುವ ಕಾರ್ಯಾಚರಣೆಯನ್ನು ರವಿವಾರ ಆರಂಭಿಸಿತು.

ಹನ್ನೆರಡು ಬಾಲಕರು ಮತ್ತು ಅವರ ಕೋಚ್‌ನ್ನು ಪ್ರವಾಹಪೀಡಿತ ಗುಹೆಯಿಂದ ಹೊರತರಲು ವಿವರವಾದ ಯೋಜನೆಯೊಂದನ್ನು ರೂಪಿಸಲಾಗಿತ್ತು ಹಾಗೂ ಸರ್ವರ ಸಹಕಾರದೊಂದಿಗೆ ಕಾರ್ಯಾಚರಣೆ ಯಶಸ್ವಿಯಾಯಿತು. ಜೊತೆಗೆ, ತೆರವು ಕಾರ್ಯಾಚರಣೆಯ ಯಶಸ್ಸಿಗೆ ಅದೃಷ್ಟವೂ ಬಹುಮಟ್ಟಿಗೆ ಕಾರಣವಾಯಿತು. ಒಂದು ವೇಳೆ, ಮತ್ತೊಮ್ಮೆ ಭಾರೀ ಮಳೆ ಸುರಿದಿದ್ದರೆ ಯೋಜನೆಯೆಲ್ಲಾ ಅಸ್ತವ್ಯಸ್ತವಾಗುತ್ತಿತ್ತು ಹಾಗೂ ಗುಹೆಯಲ್ಲಿದ್ದವರ ಜೀವಗಳಿಗೆ ಅಪಾಯ ಎದುರಾಗುತ್ತಿತ್ತು.

ಈ ವಿದ್ಯಮಾನ ಅಂತಾರಾಷ್ಟ್ರೀಯ ಗಮನ ಸೆಳೆಯಿತು. ಜಾಗತಿಕ ಮಾಧ್ಯಮಗಳು ಗುಹೆಯ ಬಾಗಿಲಲ್ಲೇ ಬೀಡುಬಿಟ್ಟಿದ್ದವು.

ಫುಟ್ಬಾಲ್ ತಂಡದ ಸದಸ್ಯರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಮುಳುಗು ತರಬೇತಿ

11 ಮತ್ತು 16 ವರ್ಷಗಳ ನಡುವಿನ ವಯಸ್ಸಿನ ಬಾಲಕರಿಗೆ ನೀರಿನಲ್ಲಿ ಮುಳುಗಿ ಮುನ್ನಡೆಯುವ ಅಥವಾ ಸ್ಕೂಬಾ ಡೈವಿಂಗ್‌ನ ಯಾವುದೇ ಅನುಭವವಿರಲಿಲ್ಲ. ಹಾಗಾಗಿ, ಅವರಿಗೆ ಈ ಬಗ್ಗೆ ಕಿರು ಅವಧಿಯ ತರಬೇತಿಯನ್ನು ನೀಡಲಾಯಿತು.

ಗುಹೆಯ ಒಳಗಿನ ಕೆಸರುಮಿಶ್ರಿತ ನೀರಿನಲ್ಲೇ ಈ ಬಾಲಕರು ಮತ್ತು ಕೋಚ್‌ಗೆ ವಿದೇಶಿ ಮತ್ತು ಥಾಯ್ ನೇವಿ ಸೀಲ್ ಮುಳುಗುಗಾರರು ತರಬೇತಿ ನೀಡಿದರು.

ಆದರೆ, ಅದು ಸುಲಭದ ಕೆಲಸವಾಗಿರಲಿಲ್ಲ. ಥಾಯ್ಲೆಂಡ್‌ನ ಮಾಜಿ ನೇವಿ ಸೀಲ್ ಮುಳುಗುಗಾರರೊಬ್ಬರು ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟ ಬಳಿಕ ಅಪಾಯದ ತೀವ್ರತೆಯ ಅರಿವು ಎಲ್ಲರಿಗೂ ಆಗಿತ್ತು. ಗುಹೆಯ ಒಳಗೆ ಸಾಗುವ ದಾರಿಯ ಉದ್ದಕ್ಕೂ ಆಮ್ಲಜನಕದ ಸಿಲಿಂಡರ್‌ಗಳನ್ನು ಇರಿಸುತ್ತಿದ್ದ ವೇಳೆ ಅವರು ಸಾವನ್ನಪ್ಪಿದ್ದರು.

ಗುಹೆಯಿಂದ ಹೊರಬರುವಾಗ, ಪ್ರತಿಯೊಬ್ಬ ಬಾಲಕನ ಹಿಂದೆ ಮತ್ತು ಮುಂದಿನಿಂದ ತಲಾ ಒಬ್ಬರು ಅನುಭವಿ ಮುಳುಗುಗಾರರಿದ್ದರು. ಬಾಲಕರ ಆಮ್ಲಜನಕ ಸಿಲಿಂಡರ್‌ಗಳನ್ನು ಅನುಭವಿ ಮುಳುಗುಗಾರರು ಹೊತ್ತಿದ್ದರು. ಎರಡು ಕಿಲೋಮೀಟರ್‌ಗೂ ಹೆಚ್ಚಿನ ಕತ್ತಲು ಮತ್ತು ಕಿರಿದಾದ ದಾರಿಯಲ್ಲಿ ಟಾರ್ಚ್ ಮತ್ತು ಮಾರ್ಗದರ್ಶಿ ಹಗ್ಗದ ಸಹಾಯದಿಂದ ಅವರು ಹೊರಗೆ ಬಂದರು.

ಬಾಲಕರನ್ನು ಒಬ್ಬೊಬ್ಬರಾಗಿ ಹೊರತರಲಾಯಿತು. ರವಿವಾರ ನಾಲ್ವರು ಹೊರಬಂದರೆ, ಸೋಮವಾರ ಮತ್ತೆ ನಾಲ್ವರು ಬಂದರು. ಉಳಿದ ನಾಲ್ವರು ಮಕ್ಕಳು ಮತ್ತು ಕೋಚ್‌ನ್ನು ಮಂಗಳವಾರ ಹೊರತರಲಾಯಿತು.

ಒಂದು ಯಾನಕ್ಕೆ 10 ಗಂಟೆ

ಹೋಗಿಬರುವ ಒಂದು ಪ್ರಯಾಣಕ್ಕೆ 10 ಗಂಟೆಗಳು ತಗಲಿದವು. ಆದರೆ ಕೊನೆಯ ದಿನದ ಕಾರ್ಯಾಚರಣೆ ವೇಗವಾಗಿ ನಡೆಯಿತು. ಸುಮಾರು 9 ಗಂಟೆಗಳಲ್ಲಿ ಎಲ್ಲ ಐವರನ್ನು ಹೊರಗೆ ಕರೆತರಲಾಯಿತು.

ಉದ್ವೇಗನಿವಾರಕ ಮಾತ್ರೆಗಳು

ಕತ್ತಲಿನ ಸುದೀರ್ಘ ನೀರಿನಡಿಯ ಪ್ರಯಾಣದ ವೇಳೆ ಎಳೆಯ ಮಕ್ಕಳು ಗಾಬರಿಗೊಳ್ಳುವ ಸಾಧ್ಯತೆ ದಟ್ಟವಾಗಿತ್ತು. ಹಾಗಾದರೆ, ನೀರಿನಡಿಯ ಪ್ರಯಾಣದ ವೇಳೆ ಮಕ್ಕಳು ಅಪಾಯಕ್ಕೆ ಗುರಿಯಾಗುವ ಸಾಧ್ಯತೆಯಿತ್ತು. ಹಾಗಾಗಿ, ಅವರಿಗೆ ಲಘು ಪ್ರಮಾಣದ ಉದ್ವೇಗನಿವಾರಕ ಮಾತ್ರೆಗಳನ್ನು ನೀಡಲಾಯಿತು ಎಂದು ಥಾಯ್ಲೆಂಡ್‌ನ ಸೇನಾಡಳಿತಗಾರ ಪ್ರಯೂತ್ ಚಾನ್-ಒ-ಚ ಹೇಳಿದರು.

ತಂಡದೊಂದಿಗೆ ವಾಸಿಸಿದ್ದ ಮುಳುಗುಗಾರರು, ವೈದ್ಯ

ಜುಲೈ 2ರಂದು ಇಂಗ್ಲೆಂಡ್ ಮುಳುಗುಗಾರರು ಫುಟ್ಬಾಲ್ ತಂಡವನ್ನು ಆಳ ಗುಹೆಯಲ್ಲಿ ಪತ್ತೆಹಚ್ಚಿದ ಬಳಿಕ, ಮಕ್ಕಳೊಂದಿಗೆ ಮೂವರು ಥಾಯ್ಲೆಂಡ್ ನೇವಿ ಸೀಲ್ ಮುಳುಗುಗಾರರು ಮತ್ತು ಓರ್ವ ಸೇನಾ ವೈದ್ಯ ನಿರಂತರವಾಗಿ ವಾಸಿಸಿದ್ದರು.

ಆಕಸ್ಮಿಕ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು ಎನ್ನುವ ‘ಆಪತ್ಕಾಲದ ಯೋಜನೆ’ಯನ್ನು ಅವರು ಹೊಂದಿದ್ದರು.

ಮಂಗಳವಾರ ತಂಡದ ಎಲ್ಲ ಸದಸ್ಯರು ಹೊರಬಂದ ಬಳಿಕ ವೈದ್ಯ ಮತ್ತು ನೇವಿ ಸೀಲ್ ಸದಸ್ಯರು ಕೊನೆಯದಾಗಿ ಹೊರಬಂದರು.

ಆಹಾರ, ಮಸಾಜ್ ಸ್ಟಾಲ್‌ಗಳು!

ಒಂದು ಕಡೆ ಗುಹೆಯ ಒಳಗೆ ಸಿಕ್ಕಿಹಾಕಿಕೊಂಡಿದ್ದ ಮಕ್ಕಳನ್ನು ರಕ್ಷಿಸುವ ಗಂಭೀರ ಕಾರ್ಯಾಚರಣೆ ನಿರಂತರವಾಗಿ ಸಾಗುತ್ತಿದ್ದರೆ, ಈ ಅವಧಿಯಲ್ಲಿ ಸ್ಥಳೀಯರು ಗುಹೆಯ ಹೊರಗಡೆ ಆಹಾರ ಮತ್ತು ಮಸಾಜ್ ಸ್ಟಾಲ್‌ಗಳನ್ನು ಸ್ಥಾಪಿಸಿ ವ್ಯಾಪಾರ ಮಾಡುತ್ತಿದ್ದರು!

ಗುಹೆಗೆ ಭಾರೀ ಸಂಖ್ಯೆಯ ಜನರು ಭೇಟಿ ನೀಡುತ್ತಿದ್ದ ಸಂದರ್ಭವನ್ನು ಅವರು ಸರಿಯಾಗಿ ಬಳಸಿಕೊಂಡಿದ್ದರು!

ರಕ್ಷಕನ ತಂದೆ ನಿಧನ

ಗುಹೆಯಲ್ಲಿ ಬಂಧಿಯಾಗಿದ್ದ ತಂಡದೊಂದಿಗೆ ಒಂದು ವಾರ ವಾಸಿಸಿ ಅವರಲ್ಲಿ ಮನೋಸ್ಥೈರ್ಯ ತುಂಬಿದ್ದ ಆಸ್ಟ್ರೇಲಿಯದ ವೈದ್ಯ ರಿಚರ್ಡ್ ಹ್ಯಾರಿಸ್ ಗುಹೆಯಿಂದ ಹೊರಬಂದ ಸ್ವಲ್ಪವೇ ಹೊತ್ತಿನಲ್ಲಿ ವೈಯಕ್ತಿಕ ಕೆಟ್ಟ ಸುದ್ದಿಯೊಂದನ್ನು ಕೇಳಿದ್ದಾರೆ.

ಯಶಸ್ವಿ ಕಾರ್ಯಾಚರಣೆ ಮುಗಿದ ಸ್ವಲ್ಪವೇ ಹೊತ್ತಿನಲ್ಲಿ ರಿಚರ್ಡ್‌ರ ತಂದೆ ನಿಧನರಾಗಿದ್ದಾರೆ.

ಅಡಿಲೇಡ್ ನಿವಾಸಿಯಾಗಿರುವ ರಿಚರ್ಡ್ ಖ್ಯಾತ ವೈದ್ಯ ಹಾಗೂ ಪರಿಣತ ಮುಳುಗುಗಾರರಾಗಿದ್ದಾರೆ.

  ಸ್ವತಃ ತನ್ನ ಪ್ರಾಣವನ್ನು ಅಪಾಯಕ್ಕೆ ಗುರಿಪಡಿಸಿ ಅವರು ಗುಹೆಯೊಳಗೆ ತೆರಳಿದ್ದರು. ಮಕ್ಕಳ ವೈದ್ಯಕೀಯ ತಪಾಸಣೆಗೆ ಅವರ ಅಗತ್ಯವನ್ನು ಮನಗಂಡು ಅವರನ್ನು ವಿಶೇಷವಾಗಿ ಕರೆಸಲಾಗಿತ್ತು.

ಫುಟ್ಬಾಲ್ ತಂಡದ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರು ಬಹುಮುಖ್ಯ ಪಾತ್ರವಹಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X