ಮಂಡ್ಯ: ನಾಲ್ವರು ಮನೆಗಳ್ಳರ ಬಂಧನ; 18.56 ಲಕ್ಷ ರೂ. ಮೌಲ್ಯದ ಸೊತ್ತು ವಶ

ಮಂಡ್ಯ, ಜು.11: ಹಗಲು ವೇಳೆ ಮನೆ ದರೋಡೆ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಕೆ.ಆರ್.ಸಾಗರ ಪೊಲೀಸರು ಬಂಧಿಸಿ 18.56 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಟಿವಿ ಹಾಗೂ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಲರಾಜ್, ಸೋಮಶೇಖರ, ಶ್ರೀಕಂಠ ಹಾಗೂ ರಾಜು ಬಂಧಿತ ಆರೋಪಿಗಳು. ಇವರು 14 ಪ್ರಕರಣದಲ್ಲಿ ಭಾಗಿಯಾಗಿದ್ದು, ಇವರಿಂದ 383 ಗ್ರಾಂ ಚಿನ್ನ ಮತ್ತು 2 ಕೆಜಿ ಬೆಳ್ಳಿ, 10 ರೇಷ್ಮೆ ಸೀರೆ, ಒಂದು ಎಲ್‍ಇಡಿ ಟಿವಿ, ಒಂದು ಗೂಡ್ಸ್ ಆಟೋವನ್ನು ವಶಕ್ಕೆ ಪಡೆಸಿಕೊಳ್ಳಲಾಗಿದೆ.
ಹಗಲಿನ ವೇಳೆ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಸಿ ನಡೆಯುವ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಸಿಪಿಐ ರವೀಂದ್ರ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ನಡೆಸಿದಾಗ ನಾಲ್ವರು ಆರೋಪಿಗಳು ಪತ್ತೆಯಾಗಿದ್ದಾರೆ ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.
Next Story





