ಮೂಡುಬಿದಿರೆಯಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಮೂಡುಬಿದಿರೆ, ಜು.12: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಮೂಡುಬಿದಿರೆ ವಕೀಲರ ಭವನ ನಿರ್ಮಾಣಕ್ಕೆ ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾದ ಎಂ. ಬಾಹುಬಲಿ ಪ್ರಸಾದ್‍ರವರ ಮನವಿ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಕೆ.ಎಸ್. ಬಿಲಗಿರವರು ಸ್ಥಳ ಪರಿಶೀಲನೆ ನಡೆಸಿದರು.
ಈ ಬಗ್ಗೆ ಪಿಡಬ್ಲ್ಯುಡಿ ಇಲಾಖೆ ಇಂಜಿನಿಯರಿಗೆ ಸೂಕ್ತ ನಕ್ಷೆ ತಯಾರಿಸುವಂತೆ ಸೂಚಿಸಿದರು. ಈ ಸಂಧರ್ಭದಲ್ಲಿ ಮೂಡುಬಿದಿರೆ ನ್ಯಾಯಾಲಯದ ನ್ಯಾಯಾಧೀಶ ಶ್ರೀ ಯಶವಂತ ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಡಿ., ಜತೆ ಕಾರ್ಯದರ್ಶಿ ಜಯ ಪ್ರಕಾಶ್ ಭಂಡಾರಿ, ಹಿರಿಯ ವಕೀಲರಾದ ಕೆ. ಆರ್ ಪಂಡಿತ್, ಎಂ. ಎಸ್ ಕೋಟ್ಯಾನ್, ಮನೋಜ್ ಶೆಣೈ, ಶಾಂತಿ ಪ್ರಸಾದ್ ಹೆಗ್ಡೆ, ಶರತ್ ಡಿ. ಶೆಟ್ಟಿ, ಮರ್ವಿನ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.
Next Story





