ಕಾರ್ಖಾನೆಯಲ್ಲಿ ವಿಷಯುಕ್ತ ಅನಿಲ ಸೋರಿಕೆ: 6 ಕಾರ್ಮಿಕರು ಮೃತ್ಯು

ಹೈದರಾಬಾದ್, ಜು.12: ಖಾಸಗಿ ಸ್ಟೀಲ್ ಮಿಲ್ ನಲ್ಲಿ ಸಂಭವಿಸಿದ ವಿಷಯುಕ್ತ ಅನಿಲ ಸೋರಿಕೆಯಿಂದ 6 ಕಾರ್ಮಿಕರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಸಂಭವಿಸಿದೆ. ಸ್ಥಾವರದಲ್ಲಿ ನಿರ್ವಹಣೆ ಕೆಲಸದ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ.
"ಇಬ್ಬರು ಸ್ಥಳದಲ್ಲೇ ಹಾಗು ನಾಲ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಿಂದ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಾರ್ಮಿಕರು ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.
ತಡಿಪತ್ರಿಯಲ್ಲಿರುವ ಈ ಮಿಲ್ ಬ್ರೆಝಿಲ್ ಮೂಲದ ಸಂಸ್ಥೆಯೊಂದಕ್ಕೆ ಸೇರಿದ್ದು ಎನ್ನಲಾಗಿದೆ.
Next Story





