ಕಣಚೂರು ಪಬ್ಲಿಕ್ ಸ್ಕೂಲ್‍ನಲ್ಲಿ ಸಂಸ್ಥಾಪಕರ ದಿನಾಚರಣೆ

ಉಳ್ಳಾಲ,ಜು.12: ಕಣಚೂರು ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ದೊರಕುವ ಶಿಕ್ಷಣದೊಂದಿಗೆ ಸರಕಾರ ಶಿಕ್ಷಣಕ್ಕೆ ನೀಡುವ ಸವಲತ್ತನ್ನು ಉಪಯೋಗಿಸಿ ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವಂತಾಗಬೇಕು ಎಂದು ಕಣಚೂರು ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಅಭಿಪ್ರಾಯಪಟ್ಟರು.
ಕಣಚೂರು ಪಬ್ಲಿಕ್ ಸ್ಕೂಲ್‍ನಲ್ಲಿ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ವಿರೂಪಾಕ್ಷ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಶಾಲಾ ಸಂಸ್ಥಾಪಕ ಯು.ಕೆ, ಮೋನು ಅವರನ್ನು ಅಭಿನಂದಿಸಿದರು.
ಫಿಸಿಯೊಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಮಹಮ್ಮದ್ ಸುಹೈಲ್ ಅವರು ತಮ್ಮ ಅಭಿನಂದನಾ ಭಾಷಣದಲ್ಲಿ ಜ್ಞಾನ ವಿಕಾಸಕ್ಕಾಗಿ ಯು.ಕೆ ಮೋನು ಅವರ ಪ್ರಯತ್ನ, ವಿದ್ಯಾಭ್ಯಾಸಕ್ಕಾಗಿ ಅವರು ಕೊಡುವ ಪ್ರೋತ್ಸಾಹವನ್ನು ಅನನ್ಯ ಎಂದರು.
ಕಾರ್ಯಕ್ರಮದಲ್ಲಿ ಕಣಚೂರು ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಉಪ ಡೀನ್ ಡಾ.ಶ್ರೀಶಾ ಕಂಡಿಗೆ, ವೈದ್ಯಕೀಯ ಅಧೀಕ್ಷಕ ಡಾ.ದೇವಿ ಪ್ರಸಾದ್ ಶೆಟ್ಟಿ ಹಾಗೂ ಆಡಳಿತಾ„ಕಾರಿಗಳಾದ ಡಾ.ರೋಹನ್ ಮೋನಿಸ್, ವೈದ್ಯಕೀಯ ತಾಂತ್ರಿಕ ವಿಭಾಗದ ಪ್ರಾಂಶುಪಾಲ ವಿವಿಯನ್ ಡಿಸೋಜ, ಕಣಚೂರು ವಿದ್ಯಾಸಂಸ್ಥೆಯ ವಿವಿಧ ವಿಭಾಗದ ಪ್ರಾಂಶುಪಾಲರುಗಳಾದ ವಿನಿಟಾ ಜಿ. ಆರ್. ಮಥಾಯಸ್, ಆನಂದಿ. ಕೆ, ಹೇಮಲತಾ, ಲಿನೆಟ್ ಉಪಸ್ಥಿತರಿದ್ದರು.
ಕಣಚೂರು ಕಾಲೇಜಿನ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹಮ್ಮದ್ ಯು.ಟಿ.ಸ್ವಾಗತಿಸಿದರು.
ಕಣಚೂರು ಪದವಿ ಕಾಲೇಜಿನ ಉಪನ್ಯಾಸಕಿ ಏಂಜಲಿನ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲೆ ರೆನಿಲ್ಡಾ ಶಾಂತಿ ಲೋಬೋ ವಂದಿಸಿದರು.







