ಕೆಳಜಾತಿಗಳ ಜನರಿಗೆ ವೈದಿಕ ವಿಧಿಗಳನ್ನು ಮೇಲ್ಜಾತಿಗಳ ಪುರೋಹಿತರು ನಿರಾಕರಿಸುವಂತಿಲ್ಲ
ಉತ್ತರಾಖಂಡ ಹೈಕೋರ್ಟ್ ನ ಚಾರಿತ್ರಿಕ ತೀರ್ಪು

ಡೆಹ್ರಾಡೂನ್,ಜು.12: ಗುರುವಾರ ಚಾರಿತ್ರಿಕ ತೀರ್ಪೊಂದನ್ನು ಪ್ರಕಟಿಸಿರುವ ಉತ್ತರಾಖಂಡ ಉಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಪರವಾಗಿ ವೈದಿಕ ವಿಧಿಗಳನ್ನು ನಡೆಸಲು ಮೇಲ್ಜಾತಿಗಳ ಪುರೋಹಿತರು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಜಾತಿಯನ್ನು ಪರಿಗಣಿಸದೆ ಎಲ್ಲ ಜನರು ಯಾವುದೇ ತಾರತಮ್ಯವಿಲ್ಲದೆ ಉತ್ತರಾಖಂಡ ರಾಜ್ಯಾದ್ಯಂತ ಯಾವುದೇ ದೇವಸ್ಥಾನವನ್ನು ಪ್ರವೇಶಿಸಲು ಅನುಮತಿ ಹೊಂದಿದ್ದಾರೆ ಎಂದೂ ನ್ಯಾಯಮೂರ್ತಿಗಳಾದ ರಾಜೀವ್ ಶರ್ಮಾ ಮತ್ತು ಲೋಕಪಾಲ ಸಿಂಗ್ ಅವರ ಪೀಠವು ಹೇಳಿತು.
ಇತರ ಜಾತಿಗಳ ಜನರು ದೇವಸ್ಥಾನಗಳಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸಲು ಯಾವುದೇ ನಿಷೇಧಗಳಿಲ್ಲ ಎಂದ ಪೀಠವು,ಸೂಕ್ತವಾಗಿ ತರಬೇತಿ ಪಡೆದ ಅರ್ಹ ವ್ಯಕ್ತಿ,ಆತ ಯಾವದೇ ಜಾತಿಗೆ ಸೇರಿದ್ದರೂ ದೇವಸ್ಥಾನದಲ್ಲಿ ಅರ್ಚಕನಾಗಿ ನೇಮಕಗೊಳ್ಳಬಹುದು ಎನ್ನುವುದನ್ನು ಸ್ಪಷ್ಟಪಡಿಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯನ್ನು ನಡೆಸುತ್ತಿದ್ದ ಪೀಠವು ತಿಳಿಸಿತು.
Next Story





