ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಇಬ್ಬರ ಸೆರೆ
ಇಬ್ಬರು ಯುವತಿಯರ ರಕ್ಷಣೆ

ಮಂಗಳೂರು, ಜು.12: ಕೊಟ್ಟಾರ ಚೌಕಿಯ ಮನೆಯೊಂದನ್ನು ಬಾಡಿಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳಾ ಪಿಂಪ್ ಸೇರಿದಂತೆ ಇಬ್ಬರನ್ನು ನಗರದ ಸಿಸಿಬಿ ಮತ್ತು ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ಸಂದರ್ಭ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.
ಪಡುಬಿದ್ರಿ ಮುದರಂಗಡಿಯ ನಿವಾಸಿ ಸಜಿತ್ ಶೇಖರ್ (30) ಮತ್ತು ಮಹಿಳಾ ಪಿಂಪ್ ಬಂಧಿತ ಆರೋಪಿಗಳು. ಇವರಿಂದ 5 ಮೊಬೈಲ್ ಫೋನ್, 15,240ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕೊಟ್ಟಾರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಮಹಿಳಾ ಪಿಂಪ್ ಕೊಟ್ಟಾರದಲ್ಲಿ ಮನೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್ ಸುಂದರ್ ಮತ್ತು ಸಿಬ್ಬಂದಿ ಹಾಗೂ ಕಾವೂರು ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಆರ್. ನಾಯಕ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಪಿಂಪ್ ಕೊಲೆ, ದರೋಡೆ ಆರೋಪಿ:
ಪಿಂಪ್ ಮಹಿಳೆ ತ್ರಿಕೋನ ಪ್ರೇಮಕ್ಕೆ ಸಂಬಂಧಿಸಿ 2012ರ ಡಿ.22ರಂದು ನಗರದ ಬಂದರು ಪ್ರದೇಶದಲ್ಲಿ ನಡೆದ ಗಿರೀಶ್ ಪುತ್ರನ್ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿದ್ದಾಳೆ. ಕೊಲೆಯಾದ ವ್ಯಕ್ತಿಯ ಶವ ಡಿ.23ರಂದು ಬಜಪೆ ಸಮೀಪದ ಪೆರ್ಮುದೆಯಲ್ಲಿ ಪತ್ತೆಯಾಗಿತ್ತು.







