ಅಯೋಧ್ಯೆಯಲ್ಲಿ ಸಾಮೂಹಿಕ ನಮಾಝ್ ಕಾರ್ಯಕ್ರಮ ರದ್ದು

ಲಕ್ನೋ, ಜು. 12: ಕೆಲವು ಸಂತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ನಮಾಝ್ ಹಾಗೂ ಕುರ್‌ಆನ್ ಪಠಣ ಕಾರ್ಯಕ್ರಮವನ್ನು ರಾಷ್ಟ್ರೀಯ ಮುಸ್ಲಿಂ ಮಂಚ್ ರದ್ದುಗೊಳಿಸಿದೆ.
ಎರಡು ಸಮುದಾಯಗಳ ನಡುವಿನ ಐಕ್ಯತೆಯನ್ನು ವೃದ್ದಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಕೆಲವರ ವಿರೋಧ ವ್ಯಕ್ತಪಡಿಸಿದ್ದಾರೆ. ಆದುದರಿಂದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ರಾಷ್ಟ್ರೀಯ ಮುಸ್ಲಿಂ ಮಂಚ್‌ನ ನಾಯಕರಾದ ಶಬನಾ ಆಝ್ಮಿ ಹೇಳಿದ್ದಾರೆ.
ಕಾರ್ಯಕ್ರಮ ರದ್ದುಗೊಳಿಸುವಂತೆ ಸ್ಥಳೀಯಾಡಳಿತ ಯಾವುದೇ ಒತ್ತಡ ಹೇರಿಲ್ಲ. ನಮ್ಮ ಸ್ವಂತ ಇಚ್ಛೆಯಿಂದ ಈ ಕಾರ್ಯಕ್ರಮ ರದ್ದುಗೊಳಿಸಿದ್ದೇವೆ. ಇತರ ಕಾರ್ಯಕ್ರಮಗಳು ನಿಗದಿತ ದಿನಾಂಕದಂದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
Next Story





