ಪ್ರತ್ಯೇಕ ಘಟನೆ: ಇಬ್ಬರ ಆತ್ಮಹತ್ಯೆ
ಕುಂದಾಪುರ, ಜು.12: ತಾಲೂಕಿನ ಹೆಮ್ಮಾಡಿ ಗ್ರಾಮದ ಮಡಿವಾಳ ಕೆರೆ ಬಳಿ ಇರುವ ತೋಟದ ಜಾಗದಲ್ಲಿರುವ ಬಾವಿಗೆ ಹಾರಿ ಕಟ್‌ಬೆಲ್ತೂರಿನ ಸಿಲ್ವಿನ್ ಒಲಿವೀರಾ (50) ಎಂಬವರು ಜು.10ರ ಅಪರಾಹ್ನ 2:00ರಿಂದ ಜು.11ರ ಅಪರಾಹ್ನ 3:00ರ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಉಡುಪಿ ತಾಲೂಕು ಕೆಂಜೂರು ಗ್ರಾಮದ ಕೆಂಜೂರು ಪಡುಮನೆಯ ಶೇಖರ ನಾಯ್ಕ (32) ಎಂಬವರು ನಿನ್ನೆ ಅಪರಾಹ್ನ 11ರಿಂದ 12:30ರ ನಡುವಿನ ಅವಧಿಯಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





