ಚಾಮರಾಜನಗರ: ಮಿನಿ ಬಸ್ ಪಲ್ಟಿ; ಮಗು ಮೃತ್ಯು, ಐವರಿಗೆ ಗಾಯ

ಚಾಮರಾಜನಗರ,ಜು.12: ಪ್ರವಾಸಿ ಮಿನಿ ಬಸ್ ಪಲ್ಟಿಯಾದ ಪರಿಣಾಮ ಒಂದೂವರೆ ವರ್ಷದ ಮಗು ಸಾವನ್ನಪ್ಪಿದ್ದು, ಹಲವಾರು ಮಂದಿಗೆ ಗಾಯಗಳಾದ ಘಟನೆ ಜಿಲ್ಲೆಯ ಬೆಂಡರವಾಡಿ ಗ್ರಾಮದ ಬಳಿ ಇರುವ ಕೆರೆ ಬಳಿ ನಡೆದಿದೆ.
ತಾಲೂಕಿನ ಬೆಂಡರವಾಡಿ ಕೆರೆ ಬಳಿಯ ರಸ್ತೆ ಡುಬ್ಬ ಕಂಡು ಬ್ರೇಕ್ ಹಾಕಿದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಹೊಡೆದ ಪರಿಣಾಮ ಅಲ್ವಿನ್ ಎಂಬ ಮಗು ಮೃತಪಟ್ಟಿದೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕುಳಿಚಲ್ ಗ್ರಾಮದ ಕುಟುಂಬವೊಂದು ಕರ್ನಾಟಕ ಪ್ರವಾಸ ಕೈಗೊಂಡ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ 5 ಮಂದಿ ಗಾಯಗೊಂಡಿದ್ದು, ಮೃತಪಟ್ಟ ಮಗುವಿನ ತಂದೆ ಗಂಭೀರವಾಗಿ ಗಾಯಗೊಂಡು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





