ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಹೋದರರು ಮೃತ್ಯು

ಕಲಬುರ್ಗಿ, ಜು.13: ವಿದ್ಯುತ್ ತಂತಿ ಸ್ಪರ್ಶಿಸಿ ಸಹೋದರರಿಬ್ಬರು ಮೃತಪಟ್ಟ ಘಟನೆ ಜೇವರ್ಗಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಜೇವರ್ಗಿ ತಾಲೂಕಿನ ದೇವಪ್ಪ(14) ಹಾಗೂ ರಾಜು(10) ಮೃತಪಟ್ಟ ಸಹೋದರರು. ಇವರೊಂದಿಗೆ 3 ಮೇಕೆಗಳು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿವೆ. ಈ ಸಹೋದರರು ಮೇಕೆ ಮೇಯಿಸಲು ಹೊಲಕ್ಕೆ ಹೋಗಿದ್ದಾಗ ಬೇಲಿ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Next Story





