ಬೆಂಗಳೂರು: ಲ್ಯಾಪ್‌ಟಾಪ್ ಕಳವು ಆರೋಪಿಯ ಬಂಧನ

ಬೆಂಗಳೂರು, ಜು.13: ರಾತ್ರಿ ವೇಳೆ ಮನೆ ಹಾಗೂ ಕಚೇರಿಗಳ ಕಿಟಕಿಗಳ ಮೂಲಕ ಲ್ಯಾಪ್‌ಟಾಪ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪಿಯನ್ನು ಬಂಧಿಸಿ, 12 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಅಮೃತಹಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಮೃತಹಳ್ಳಿಯ ಚರ್ಚ್, ಪಾದಚಾರಿ ರಸ್ತೆಗಳ ಬದಿಯಲ್ಲಿ ಮಲಗುತ್ತಿದ್ದ ಜಾನ್‌ಕೆನಡಿ ಅಲಿಯಾಸ್ ಆರ್ಮುಗಂ(49) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 3 ಲಕ್ಷ 60 ಸಾವಿರ ರೂ. ಮೌಲ್ಯದ ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
Next Story





