ದ.ಕ., ಉಡುಪಿ ಚಿತ್ರ ಮಂದಿರದಲ್ಲಿ ‘ಪಡ್ಡಾಯಿ’ ಚಲನಚಿತ್ರ ಪ್ರದರ್ಶನ ಆರಂಭ
ಮಂಗಳೂರು, ಜು.13: ರಾಷ್ಟ್ರಮಟ್ಟದಲ್ಲಿ ಚಲನಚಿತ್ರ ಪ್ರಶಸ್ತಿ ಪಡೆದ ತುಳು ಭಾಷೆಯ 100 ನಿಮಿಷದ ಸಮಯದ ಚಲನಚಿತ್ರ ‘ಪಡ್ಡಾಯಿ’ ದಕ್ಷಿಣ ಕನ್ನಡ ಹಾಗೂ ಉಡುಪಿ ಚಲನನಚಿತ್ರ ಮಂದಿರದಲ್ಲಿ ಪ್ರದರ್ಶನಕ್ಕೆ ಚಾಲನೆ ದೊರೆತಿದೆ.
ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾ ಚಿತ್ರಮಂದಿರದಲ್ಲಿ ಸಾಂಕೇತಿಕವಾಗಿ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಚಲನಚಿತ್ರ ನಿರ್ದೇಶಕರಾದ ವಿಜಯ ಕುಮಾರ್ ಕೊಡಿಯಾಲ ಬೈಲ್, ಪ್ರಕಾಶ್ ಪಾಂಡೇಶ್ವರ, ಚಲನಚಿತ್ರ ನಿರ್ಮಾಪಕ ಕಿಶೋರ್ ಡಿ ಶೆಟ್ಟಿ, ದ.ಕ ಜಿಲ್ಲಾ ಪತ್ರ ಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪಡ್ಡಾಯಿ ಚಿತ್ರದ ನಿರ್ದೇಶಕ ಅಭಯ ಸಿಂಹ ನಿರ್ಮಾಪಕ ನಿತ್ಯಾನಂದ ಪೈ, ಛಾಯಾಗ್ರಾಹಕ ವಿಷ್ಣು ಪ್ರಸಾದ್, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್, ಧ್ವನಿ ನಿರ್ವಹಣೆ ಮಾಡಿದ ಜೇಮಿ ಡಿಸಿಲ್ವ, ನಿರ್ಮಾಣ ನಿರ್ವಹಣೆ ಮಾಡಿದ ರಾಜೇಶ್ ಕುಡ್ಲ, ಕಲಾವಿದರಾದ ಮೋಹನ್ ಶೇಣಿ, ಬಿಂದು ರಕ್ಷಿದಿ, ಚಂದ್ರಹಾಸ ಉಳ್ಳಾಲ, ರವಿಭಟ್, ಗೋಪಿನಾಥ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
Next Story





