ಬ್ರಹ್ಮಾವರ: ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಭಿಯಾನ

ಬ್ರಹ್ಮಾವರ, ಜು.13: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತಾದ ಪ್ರಚಾರ ಆಂದೋಲನವನ್ನು ಇಂದು ಬ್ರಹ್ಮಾವರದಲ್ಲಿ ಇಲ್ಲಿನ ನಿರ್ಮಲ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದು, ಇದರಂತೆ ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ನಿಷೇಧ ಜಾಥಾ ನಡೆಸಿ, ಶಾಲಾ ಸುತ್ತ ಮುತ್ತಲಿನ ಅಂಗಡಿಗಳಿಗೆ ತೆರಳಿ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಜಾಗ್ರತಿ ಮೂಡಿಸಿದರು.
ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ನಿರ್ಮಲ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಗೂ ಶಾಲೆಯ ಪ್ರಾಂಶುಪಾಲರಾದ ವಂ. ಜೋಸ್ಲಿ ಡಿಸಿಲ್ವ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಆಚಾರ್ಯ ಹಾಗೂ ನಮ್ಮ ಕ್ಲಸ್ಟರ್‌ನ ಸಿಆರ್‌ಪಿ ಆಶ್ವಿನಿ ಅವರೊಂದಿಗೆ ಅಂಗಡಿಮುಂಗಟ್ಟುಗಳಿಗೆ ತೆರಳಿ ಕರಪತ್ರಗಳೊಂದಿಗೆ ಅಂಗಡಿಗಳ ಮಾಲಕರಿಗೆ ಗುಲಾಬಿ ಹೂ ನೀಡಿ ಪ್ಲಾಸ್ಟಿಕ್ ನಿರ್ಮೂಲನದ ಕುರಿತು ಜಾಗೃತಿ ನೀಡಿದರು.
ಶಾಲೆಯಿಂದ ಜಾಥಾದಲ್ಲಿ ತೆರಳಿದ ವಿದ್ಯಾರ್ಥಿಗಳು ಪ್ಲಾಸ್ಟಿಕ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿ ಅಂಗಡಿಗಳಿಗೆ ತೆರಳಿ ಕರಪತ್ರವನ್ನು ಹಂಚಿ ದರಲ್ಲದೇ, ಅಂಗಡಿ ಗೋಡೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಿದರು.





