ಬಾಲ್ಯದಲ್ಲೇ ಪರಿಸರ ಪ್ರೇಮ ಬೆಳೆಸಿಕೊಳ್ಳಿ: ವಂ. ಕ್ಲೇನಿ ಡಿಸೋಜ

ಕಲ್ಯಾಣಪುರ, ಜು.13: ವಿದ್ಯಾರ್ಥಿಗಳು ಬಾಲ್ಯದಲ್ಲೇ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಬೆಳೆದು ಪ್ರಜ್ಞಾವಂತ ನಾಗರಿಕರಾಗಿ ಸಮಾಜದಲ್ಲಿ ಬದುಕು ವಾಗ ಪರಿಸರ ಮಾರಕ ವಸ್ತುಗಳ ಬಳಕೆ ಮಾಡದೇ ಮನೆಯಲ್ಲಿ ಮತ್ತು ಸಮುದಾಯದಲ್ಲಿ ಪರಿಸರ ಪ್ರೇಮವನ್ನು ಬೆಳೆಸಲು ಸಾಧ್ಯವಿದೆ ಎಂದು ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್‌ನ ಸಹಾಯಕ ಧರ್ಮಗುರು ವಂ. ಕ್ಲೇನಿ ಡಿಸೋಜ ಹೇಳಿದ್ದಾರೆ.
ಕಲ್ಯಾಣಪುರದ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ‘ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿ ಮಾತನಾಡುತಿದ್ದರು.
ಕಲ್ಯಾಣಪುರದ ಮೌಂಟ್ ರೋಸರಿ ಆಂಗ್ಲ ಮ್ಯಾಮಶಾಲೆಯಲ್ಲಿವಿದ್ಯಾರ್ಥಿಗಳ‘ಪ್ಲಾಸ್ಟಿಕ್‌ತ್ಯಜಿಸಿಪರಿಸರಬೆಳೆಸಿ’ಅಭಿಯಾನಕ್ಕೆಚಾಲನೆನೀಡಿಶು ಹಾರೈಸಿ ಮಾತನಾಡುತಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಉಡುಪಿ ಜಿಪಂ ಪ್ಲಾಸ್ಟಿಕ್ ತ್ಯಜಿಸಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯ ಸ್ಕೌಟ್ಸ್-ಗೈಡ್ಸ್, ಯುವ ವಿದ್ಯಾರ್ಥಿ ಸಂಚಾಲನದ ವಿದ್ಯಾರ್ಥಿಗಳು ಶಾಲೆಯಿಂದ ಸಂತೆಕಟ್ಟೆ ಪೇಟೆಯಲ್ಲಿ ಜಾಥಾ ನಡೆಸಿ ಫ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸಿದರು.
ಸಾರ್ವಜನಿಕರಲ್ಲಿ ಫ್ಲಾಸ್ಟಿಕ್ ಕುರಿತಂತೆ ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ನಿಷೇಧ ಕುರಿತಾದ ಕರಪತ್ರ ಮತ್ತು ಸ್ಟಿಕ್ಕರ್‌ಗಳನ್ನು ಗುರುತಿಸಿದ ಅಂಗಡಿ, ಮಾರುಕಟ್ಟೆಗಳಿಗ ಹಂಚಿ ಗುಲಾಬಿ ಹೂ ನೀಡಿ ಮಾಲಕರ ಮನವೊಲಿಸಿದರು. ಕೆಲವು ಅಂಗಡಿ ಮಾಲಕರು ತಾವು ಈಗಾಗಲೇ ಬಟ್ಟೆಚೀಲವನ್ನು ಗ್ರಾಹಕರಿಗೆ ನೀಡು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂತೆಕಟ್ಟೆ ರಿಕ್ಷಾ ತಂಗುದಾಣದಲ್ಲಿ ವಿದ್ಯಾರ್ಥಿಗಳು ಪರಿಸರದ ಗೀತೆಗಳನ್ನು ಹಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಬೀದಿ ನಾಟಕವನ್ನು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳ ಅಭಿಯಾನದ್ದುದ್ದಕ್ಕೂ ಜಲ ಮರುಪೂರಣ ಅಭಿವರ್ಧಕರು, ರಾಜ್ಯಸಂಪನ್ಮೂಲ ವ್ಯಕ್ತಿಯಾದ ಜೋಸೆಫ್ ರೆಬೆಲ್ಲೊ ಜಾಗೃತಿ ಮೂಡಿಸಿದರು. ಕಲ್ಯಾಣಪುರ ಕ್ಲಸ್ಟರಿನ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜ್ಯೋತಿಕಲಾ ವಿದ್ಯಾರ್ಥಿಗಳ ಜೊತೆಗಿದ್ದರು.
ಕಜಾಥಾದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಿ.ವಂದಿತ, ಶಿಕ್ಷಕರಾದ ಆನಂದ್, ತಾರನಾಥ್, ಶಿಕ್ಷಕಿಯರಾದ ಶಕುಂತಳಾ, ಪುಷ್ಪ, ಮಾಗ್ದಲಿನ, ಸಾಲಾ, ಸ್ವಪ್ನಾ ಪಾಲ್ಗೊಂಡರು. ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







