ಹನೂರು: ರಸ್ತೆ ಅಪಘಾತ; ಮಹಿಳೆ ಸ್ಥಳದಲ್ಲೇ ಮೃತ್ಯು

ಹನೂರು,ಜು.13: ಕೆಎಸ್‍ಆರ್‍ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬಾಗದಲ್ಲಿದ್ದ ಮಹಿಳೆ ಸ್ಥಳದಲ್ಲಿಯೇ ಮೃತ ಪಟ್ಟು, ಬೈಕ್ ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಹನೂರು ಸಮೀಪದ ಮಲೈಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಕೂಣ್ಣನಕೆರೆ– ವಡಕೆಹಳ್ಳ ಮಾರ್ಗ ಮದ್ಯೆ ಸಂಭವಿಸಿದೆ.
ಸೌಮ್ಯ ( 24) ಮೃತ ಮಹಿಳೆಯಾಗಿದ್ದು, ಈಕೆಯ ಪತಿ ಮಂಜುನಾಥ್ (34) ಗೆ ಗಂಭೀರ ಗಾಯಗಳಾಗಿದೆ. ಇವರು ನಂಜನಗೂಡು ತಾಲೂಕು ಯಮರಗಾಲ ನಿವಾಸಿಗಳಾಗಿದ್ದು, ಮಲೈಮಹದೇಶ್ವರ ಬೆಟ್ಟಕ್ಕೆ ಪೂಜೆಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಮಲೈಮಹದೇಶ್ವರ ಬೆಟ್ಟದ ಪೊಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story





