ಜು.31ರೊಳಗೆ ವಸತಿ, ನಿವೇಶನ ರಹಿತರಿಗೆ ನೋಂದಣಿಗೆ ಅವಕಾಶ
ಮಂಗಳೂರು, ಜು.13:ದ.ಕ.ಜಿಲ್ಲೆಯಲ್ಲಿರುವ ವಸತಿ ರಹಿತರು ಹಾಗೂ ನಿವೇಶನ ರಹಿತರನ್ನು ಗುರುತಿಸಿ ಅರ್ಹರಿಗೆ ವಸತಿ ಹಾಗೂ ನಿವೇಶನ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಸರಕಾರ ಉದ್ದೇಶಿಸಿದ್ದು, ಸಂಬಂಧಪಟ್ಟ ಗ್ರಾಪಂಗಳ ಮುಖಾಂತರ ವಸತಿ ಹಾಗೂ ನಿವೇಶನ ರಹಿತರನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅರ್ಜಿ ಸಲ್ಲಿಸಲು ಜು.31ಕೊನೆಯ ದಿನವಾಗಿದೆ.
ವಸತಿ ಹಾಗೂ ನಿವೇಶನ ರಹಿತರು ಸಂಬಂಧಪಟ್ಟ ಗ್ರಾಪಂಗೆ ಭೇಟಿ ನೀಡಿ ತಮ್ಮ ಆಧಾರ್ ಕಾರ್ಡ್ ಹಾಗೂ ಛಾಯಚಿತ್ರದೊಂದಿಗೆ ಅಗತ್ಯ ಮಾಹಿತಿಗಳನ್ನು ತಮ್ಮ ಹೆಸರನ್ನು ಶಾಶ್ವತ ವಸತಿ ರಹಿತರ ಹಾಗೂ ನಿವೇಶನ ರಹಿತರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ದ.ಕ.ಜಿಪಂ ಸಿಇಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





