ಕಾರು ಢಿಕ್ಕಿ: ಆವರಣ ಗೋಡೆ, ವಿದ್ಯುತ್ ಕಂಬಕ್ಕೆ ಹಾನಿ

ಉಡುಪಿ, ಜು.13: ನಿಯಂತ್ರಣ ತಪ್ಪಿದ ಕಾರೊಂದು ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಚಿತ್ರಕಲಾ ಮಂದಿರದ ಕಲಾ ವಿದ್ಯಾಲಯದ ಆವರಣದ ಗೋಡೆ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಹಾನಿ ಉಂಟು ಮಾಡಿರುವ ಘಟನೆ ಜು.12ರ ಮಧ್ಯ ರಾತ್ರಿ ನಂತರ ನಡೆದಿದೆ.
ಅಶ್ವಿನ್ ಕಿಣಿ ಎಂಬವರು ಜೂಮ್ ಕಾರನ್ನು ಕರಾವಳಿ ಬೈಪಾಸ್ ಕಡೆಯಿಂದ ಕಲ್ಸಂಕ ಕಡೆಗೆ ಚಲಾಯಿಸಿಕೊಂಡು ಬಂದಿದ್ದು, ಅತಿವೇಗ ಹಾಗೂ ಅಜಾಗರೂ ಕತೆಯ ಚಾಲನೆಯಿಂದ ನಿಯಂತ್ರಣ ತಪ್ಪಿದ ಕಾರು, ಸಿಟಿ ಬಸ್ ನಿಲ್ದಾಣದ ಬಳಿ ಇರುವ ಚಿತ್ರಕಲಾ ಮಂದಿರದ ಕಲಾವಿದ್ಯಾಲಯದ ಆವರಣದ ಗೋಡೆಗೆ, ನಂತರ ಅಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ವಿದ್ಯುತ್ ಕಂಬ, ಕಂಪೌಂಡ್ ಗೋಡೆ, ಕಟ್ಟಡಕ್ಕೆ ಹಾನಿ ಯಾಗಿದೆ. ಕಾರಿನಲ್ಲಿದ್ದ ವರ್ಷಿತ್, ಅವಿನಾಶ್, ಆದಿತ್ಯ ಎಂಬವರು ಸಣ್ಣ ಪುಟ್ಟ ಗಾಯ ಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





