ಗಾಂಜಾ ಸೇವನೆ: ಓರ್ವ ವಶಕ್ಕೆ
ಮಣಿಪಾಲ, ಜು.13: ಮಣಿಪಾಲದ ರಾಜೀವ ನಗರ ಬಸ್ ನಿಲ್ದಾಣ ಬಳಿ ಜು.12ರಂದು ಬೆಳಗ್ಗೆ ಗಾಂಜಾ ಸೇವನೆ ಮಾಡಿದ್ದ ಓರ್ವನನ್ನು ಉಡುಪಿ ಡಿಸಿಐಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗಾಂಜಾ ಸೇವನೆ ಮಾಡಿದ ರಾಜೀವ ನಗರದ ಪ್ರದೀಪ ಆಚಾರ್ಯ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮಣಿಪಾಲ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಇದರಿಂದ ಆತ ಗಾಂಜಾವನ್ನು ಸೇವನೆ ಮಾಡಿರುವುದು ಧೃಢ ಪಟ್ಟಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story





