ಜಾಮೀನು: ಜು.17ಕ್ಕೆ ಅಂತಿಮ ಆದೇಶ
ಹುಸೇನಬ್ಬ ಕೊಲೆ ಪ್ರಕರಣ
ಉಡುಪಿ, ಜು.13: ಪೆರ್ಡೂರು ದನದ ವ್ಯಾಪಾರಿ ಹುಸೇನಬ್ಬ ಕೊಲೆ ಪ್ರಕರಣದ ಆರೋಪಿ ದೀಪಕ್ ಹೆಗ್ಡೆ ಜಾಮೀನು ಅರ್ಜಿಗೆ ಸಂಬಂಧಿಸಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿಬಾಯಿ ಇಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರತಿವಾದ ಮಂಡಿಸಿದರು.
ವಾದ ಪ್ರತಿವಾದವನ್ನು ಆಲಿಸಿದ ಜಿಲ್ಲಾ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಜಾಮೀನು ಅರ್ಜಿಯ ಅಂತಿಮ ಆದೇಶವನ್ನು ಜು.17ರಂದು ನೀಡುವುದಾಗಿ ತಿಳಿಸಿದರು. ಹುಸೇನಬ್ಬರಿಗೆ ಮನೆಯ ದನವನ್ನು ಮಾರಾಟ ಮಾಡಿ, ಬಳಿಕ ಆ ಕುರಿತು ಬಜರಂಗದಳದವರಿಗೆ ಮಾಹಿತಿ ನೀಡಿದ್ದ ದೀಪಕ್ ಹೆಗ್ಡೆ ಈ ಪ್ರಕರಣ ದಲ್ಲಿ ಬಂಧಿತನಾಗಿ ಇದೀಗ ಮಂಗಳೂರು ಜೈಲಿನಲ್ಲಿದ್ದಾನೆ.
Next Story





