ಉಚ್ಚಿಲ ಕಡಲ್ಕೊರೆತ: ಸಮುದ್ರಪಾಲಾದ ಮರಗಳು
ಉಳ್ಳಾಲ, ಜು. 13: ಉಳ್ಳಾಲ ಸೋಮೇಶ್ವರದ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಮತ್ತೆ ಆರಂಭವಾಗಿದ್ದು, ಸೋಮೇಶ್ವರ ಉಚ್ಚಿಲದಲ್ಲಿ 50 ರಷ್ಟು ತೆಂಗು ಹಾಗೂ ಇತರೆ ಮರಗಳು ಸಮುದ್ರಪಾಲಾಗಿರುವ ಘಟನೆ ನಡೆದಿದೆ.
ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಈ ಪ್ರದೇಶದಲ್ಲಿ ಸಮುದ್ರ ಕೊರೆತ ಹೆಚ್ಚಾಗಿತ್ತು. ಇದೀಗ ಮತ್ತೆ ಉಚ್ಚಿಲ ಉಳ್ಳಾಲ ಸಂಪರ್ಕಿಸುವ ರಸ್ತೆಗೂ ಸಮುದ್ರದ ಅಲೆಗಳು ಹೊಡೆಯಲು ಆರಂಭಿಸಿ ಸಾರ್ವಜನಿಕ ರಸ್ತೆಯ ಜೊತೆಗೆ ಸಮುದ್ರ ತೀರದ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿದೆ.
ಉಚ್ಚಿಲ, ಸೀರೋಡ್, ಬೆಟ್ಟಂಪಾಡಿ, ಪೆರಿಬೈಲು ಪ್ರದೇಶದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ಗುರುವಾರ ತಡರಾತ್ರಿಯಿಂದ ಸಮುದ್ರದ ಅಲೆಗಳು ಬಿರುಸುಗೊಂಡು ಸುಮಾರು ಅರ್ಧ ಕಿ.ಮೀ ನಷ್ಟು ಸಮುದ್ರ ಎದುರು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೆರಿಬೈಲು ಸಮೀಪ ಹಲವು ವರ್ಷಗಳ ಹಿಂದಿನ ಪ್ರವಾಸಿಗರು ಕುಳಿತುಕೊಳ್ಳುವ ತಡೆಗೋಡೆ ಕುಸಿದುಬಿದ್ದಿದೆ. ಇದೇ ಪ್ರದೇಶದಲ್ಲಿ ರಾತ್ರಿ ಮತ್ತು ಮಧ್ಯಾಹ್ನ ವೇಳೆ ಸಮುದ್ರದ ಅಲೆಗಳು ರಸ್ತೆಗೆ ಅಪ್ಪಳಿಸಲು ಆರಂಭಿಸಿದೆ.
Next Story





