ದ.ಕ. ಜಿಲ್ಲಾ ಎಸ್‌ವೈಎಸ್‌ನಿಂದ ವಿಶೇಷ ಮಜ್ಲಿಸ್ ಕಾರ್ಯಕ್ರಮ

ಮಂಗಳೂರು, ಜು.14: ಸುನ್ನಿ ಯುವಜನ ಸಂಘ ದ.ಕ.ಜಿಲ್ಲಾ ಸಮಿತಿ ವತಿಯಿಂದ ನಗರದ ಜಂಇಯ್ಯತುಲ್ ಉಲಮಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆಯಲ್ಲಿ ವಿಶೇಷ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮರ್ಹೂಂ ಅಬ್ದುಲ್ಲ ಉಸ್ತಾದ್ ಉಪ್ಪಳ, ನೆಕ್ಕಿಲಾಡಿ ಇಸ್ಮಾಯೀಲ್ ಮುಸ್ಲಿಯಾರ್ ಹಾಗೂ ಮಾಜಿ ಸಚಿವ ಬಿ.ಎ. ಮೊಹಿದೀನ್ ಮತ್ತು ಎಸ್‌ವೈಎಸ್ ಕುಟುಂಬದಲ್ಲಿ ಮರಣ ಹೊಂದಿದವರ ಮೇಲೆ ಹಾಗೂ ಅನಾರೋಗ್ಯದಿಂದಿರುವ ಜಿ.ಎಂ. ಉಸ್ತಾದ್, ಕಂಕನಾಡಿ ಉಸ್ತಾದ್ ಅವರಿಗೆ ಕುರ್‌ಆನ್ ಪಾರಾಯಣ ಮೂಲಕ ವಿಶೇಷ ಮಜ್ಲಿಸ್ ನಡೆಸಿ ದುಆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮೂಳೂರು ಸಖಾಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ, ವಲಯ ಅಧ್ಯಕ್ಷ ಮಜೂರು ಸಅದಿ, ಬಾವ ಫಕ್ರುದ್ದೀನ್, ಖಾಸಿಂ ಪದ್ಮುಂಜೆ, ಖಲೀಲ್ ಮುಸ್ಲಿಯಾರ್, ಕಾರ್ಯದರ್ಶಿ ಉಮರ್ ಮಾಸ್ಟರ್, ಸಲೀಲ್ ಹಾಜಿ ಭಾಗವಹಿಸಿದ್ದರು.
Next Story





