Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಲ್ಲದ ರಿಲಯನ್ಸ್ ಸಂಸ್ಥೆಗೆ ‘ಶ್ರೇಷ್ಠ...

ಇಲ್ಲದ ರಿಲಯನ್ಸ್ ಸಂಸ್ಥೆಗೆ ‘ಶ್ರೇಷ್ಠ ವಿದ್ಯಾಸಂಸ್ಥೆ’ ಮಾನ್ಯತೆ ಬೆನ್ನಲ್ಲೇ ಬಿಜೆಪಿಗೆ 1,200 ಕೋಟಿ ಕೊಡುಗೆ?

ವಾರ್ತಾಭಾರತಿವಾರ್ತಾಭಾರತಿ14 July 2018 7:19 PM IST
share
ಇಲ್ಲದ ರಿಲಯನ್ಸ್ ಸಂಸ್ಥೆಗೆ ‘ಶ್ರೇಷ್ಠ ವಿದ್ಯಾಸಂಸ್ಥೆ’ ಮಾನ್ಯತೆ ಬೆನ್ನಲ್ಲೇ ಬಿಜೆಪಿಗೆ 1,200 ಕೋಟಿ ಕೊಡುಗೆ?

ಇನ್ನೂ ಅಸ್ತಿತ್ವಕ್ಕೇ ಬಾರದ ರಿಲಯನ್ಸ್ ಸಂಸ್ಥೆಯ ಜಿಯೊ ವಿವಿಗೆ ‘ಶ್ರೇಷ್ಠ ವಿದ್ಯಾಸಂಸ್ಥೆ’ ಮಾನ್ಯತೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿರುವ ಬೆನ್ನಲ್ಲೇ ರಿಲಯನ್ಸ್ ಗ್ರೂಪ್ 1,200 ಕೋಟಿ ರೂ. ಮೊತ್ತದ ಎಲೆಕ್ಟೋರಲ್ ಬಾಂಡ್ ಅನ್ನು ಬಿಜೆಪಿಗೆ ದೇಣಿಗೆ ರೂಪದಲ್ಲಿ ನೀಡಲಿದೆ. ಈ ಕುರಿತು indiascoops.com (‘ಇಂಡಿಯಾ ಸ್ಕೂಪ್ಸ್.ಕಾಮ್’) ವರದಿ ಮಾಡಿದೆ. 

ರಿಲಯನ್ಸ್ ಗ್ರೂಪ್ ನ ಜಿಯೊ ವಿಶ್ವವಿದ್ಯಾಲಯಕ್ಕೆ ‘ಶ್ರೇಷ್ಠ ವಿದ್ಯಾಸಂಸ್ಥೆ’ ಮಾನ್ಯತೆ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮ ವಿವಾದಕ್ಕೆ ಈಡಾಗಿದೆ. ಏಕೆಂದರೆ ಆ ವಿವಿ ಇನ್ನಷ್ಟೇ ಸ್ಥಾಪನೆಯಾಗಬೇಕಾಗಿದೆ. ಇದರ ಬೆನ್ನಲ್ಲೇ, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ 1,200 ಕೋಟಿ ರು. ಮೊತ್ತದ ಎಲೆಕ್ಟೋರಲ್ ಬಾಂಡ್ ಅನ್ನು ಬಿಜೆಪಿ ಪಕ್ಷಕ್ಕೆ ದೇಣಿಗೆಯಾಗಿ ನೀಡಲಿದೆ ಎಂದು ತಿಳಿದು ಬಂದಿದೆ. 

ಈ ಕುರಿತು ದೇಶದ ರಾಜಕೀಯ ತಜ್ಞರು, ಪ್ರಮುಖ ಪತ್ರಕರ್ತರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರನ್ನು ಮಾತನಾಡಿಸಿ ಸಮೀಕ್ಷೆ ನಡೆಸಿದ ‘ಇಂಡಿಯಾ ಸ್ಕೂಪ್ಸ್.ಕಾಮ್’ ವೆಬ್ಸೈಟ್, ರಿಲಯನ್ಸ್ ಗ್ರೂಪ್ 1,200 ಕೋಟಿ ರೂ. ಮೊತ್ತವನ್ನು ಚುನಾವಣಾ ಬಾಂಡ್ ಮೂಲಕ ನೀಡಿಲಿದೆ ಎಂಬುದರ ಬಗ್ಗೆ ಸವಿವರವಾದ ವರದಿ ಪ್ರಕಟಿಸಿದೆ.

ರಿಲಯನ್ಸ್ ಗ್ರೂಪ್ ನೀಡುತ್ತಿದೆ ಎನ್ನಲಾಗಿರುವ 1,200 ಕೋಟಿ ರೂ. ಮೊತ್ತದ ಎಲೆಕ್ಟೋರಲ್ ಬಾಂಡ್ ಅನ್ನು ನೇರವಾಗಿ ಹಣದ ರೂಪದಲ್ಲಿ ಬಿಜೆಪಿ ಪಕ್ಷ ಪಡೆಯುತ್ತಿಲ್ಲ. ಅಂದರೆ, ಶೇ.60ರಷ್ಟು ಹಣವನ್ನು ಸರಕು ಅಥವಾ ವಿನಿಮಯದ ಮೂಲಕ ಪಡೆದುಕೊಳ್ಳಲಿದೆ. ಅಂದರೆ ವಿಮಾನ ಬಳಕೆ, ವಿಮಾನ ಟಿಕೆಟ್, ವಾಹನಗಳ ಬಳಕೆ, ಹೋಟೆಲ್ ವಾಸ್ತವ್ಯ, ಕಂಪ್ಯೂಟರ್ ಹಾಗೂ ಲ್ಯಾಪ್ ಟಾಪ್ ಗಳು, ಮೊಬೈಲ್ ಫೋನ್ ಗಳು ಸೇರಿದಂತೆ ಇತರ ವಸ್ತುಗಳ ಮೂಲಕ ಪಕ್ಷ ಪಡೆದುಕೊಳ್ಳಲಿದೆ. ಉಳಿದ ಶೇ.40ರಷ್ಟು ಮೊತ್ತವನ್ನು ಹಣದ ರೂಪದಲ್ಲಿ ಪಡೆಯಲಿದೆ ಎಂದು ಹೇಳಲಾಗಿದೆ. 

ದೇಶದ ನೂರಾರು ರಾಜಕೀಯ ತಜ್ಞರು, ಹಲವಾರು ಪಕ್ಷಗಳ ಹಿರಿಯ ರಾಜಕಾರಣಿಗಳು ಹಾಗೂ ಪ್ರಮುಖ ಪತ್ರಕರ್ತರ ಅಭಿಪ್ರಾಯಗಳನ್ನು ಪಡೆದು ಈ ಸಮೀಕ್ಷೆ ನಡೆದಿದೆ. ಕಾಂಗ್ರೆಸ್ಸಿನ ಹಿರಿಯ ವಕ್ತಾರರೊಬ್ಬರು ಎಲೆಕ್ಟೋರಲ್ ಬಾಂಡ್ ಕುರಿತು ಮಾತನಾಡಿ, “ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯಾಗಲೀ ಇಲ್ಲವೇ ಪಕ್ಷವಾಗಲೀ ಈ ಪ್ರಮಾಣದಲ್ಲಿ ಕೊಡುಗೆಯನ್ನು ಸ್ವೀಕರಿಸಲು ಸಿದ್ಧವಿರುವುದಿಲ್ಲ. ಆದರೆ, ಚುನಾವಣಾ ತಯಾರಿಗಾಗಿ ನಗದು ರೂಪದಲ್ಲಿ 300ರಿಂದ 500 ಕೋಟಿ ರು. ಹಣವನ್ನು ಪಕ್ಷಕ್ಕೆ ಪಡೆದುಕೊಳ್ಳಬಹುದು. ಉಳಿದಂತೆ ಇನ್ನಾವುದೋ ರೂಪದಲ್ಲಿ ಅದು ಪಕ್ಷಕ್ಕೆ ಬರುವ ಸಾಧ್ಯತೆ ಹೆಚ್ಚು,” ಎಂದಿದ್ದಾರೆ.

1,200 ಕೋಟಿ ಎಲೆಕ್ಟೋರಲ್ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ ಭೂಷಣ್ ಮಾತನಾಡುತ್ತ, “ಬಿಜೆಪಿ ಸರ್ಕಾರದ ನೀತಿ ಹಾಗೂ ನಿರ್ಧಾರಗಳ ಮೂಲಕ ಅಂಬಾನಿ ಸಹೋದರರನ್ನು ಶ್ರೀಮಂತಗೊಳಿಸಿರುವುದನ್ನು ನೋಡಿದಾಗ ಅಂಬಾನಿ ಸಹೋದರರು ಬಿಜೆಪಿ ಸರ್ಕಾರಕ್ಕೆ ಸಾವಿರ ಕೋಟಿ ರೂಪಾಯಿ ನೀಡಿದರೂ ನನಗೆ ಆಶ್ಚರ್ಯವಾಗದು. ಸಹಜವಾಗಿಯೇ ಇದು ಒಂದು ರೀತಿಯಲ್ಲಿ ಕಪ್ಪಕಾಣಿಕೆ ಥರ ಪಕ್ಷಕ್ಕೆ ಹೋಗುತ್ತದೆ. 2019ರ ಚುನಾವಣಾ ವೆಚ್ಚಗಳಿಗೆ ರಿಲಯನ್ಸ್ ಗ್ರೂಪ್ ಇಂಥ ಮೊತ್ತವನ್ನು ದಾನ ಮಾಡಿರುವುದು ಅಚ್ಚರಿಯಲ್ಲ,” ಎಂದು ಹೇಳಿದ್ದಾರೆ. 

ಹೆಸರು ಬಹಿರಂಗಪಡಿಸಲು ಇಚ್ಛಿಸದ ದೆಹಲಿಯ ಹಿರಿಯ ಎಎಪಿ (ಆಮ್ ಆದ್ಮಿ ಪಾರ್ಟಿ) ಮುಖಂಡ, "ಚುನಾವಣೆ ಮುಂಚಿತವಾಗಿ ಕನಿಷ್ಠ 12 ತಿಂಗಳ ಅವಧಿಗೆ 1,500ರಿಂದ 1700 ಕೋಟಿ ರು. ವ್ಯಾಪ್ತಿಯಲ್ಲಿ ಆ ಮೊತ್ತ ಇರಬಹುದು ಎಂಬುದು ನನ್ನ ನಿರೀಕ್ಷೆ. ಅಂಬಾನಿ ಸಂಸ್ಥೆಗಳಿಗೆ ಬಿಜೆಪಿ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿರುವಾಗ 2,000 ಕೋಟಿ ದಾನ ಕೊಟ್ಟರೂ ಕಡಿಮೆಯೇ,” ಎಂದು ಟೀಕಿಸಿದ್ದಾರೆ. 

ಚುನಾವಣಾ ಬಾಂಡ್ ಕುರಿತಾಗಿ ಬಿಸಿನೆಸ್ ಲೈನ್ ಆರ್ಟಿಐ ಮೂಲಕ ಹಣಕಾಸು ಸಚಿವಾಲಯದಿಂದ ಪಡೆದುಕೊಂಡ ಮಾಹಿತಿಯಂತೆ 905 ಎಲೆಕ್ಟೋರಲ್ ಬಾಂಡ್ ಗಳು ಮೂರು ಹಂತದಲ್ಲಿ ಖರೀದಿಯಾಗಿವೆ. ಇವುಗಳ ಒಟ್ಟು ಮೊತ್ತ 438.3 ಕೋಟಿ ರೂ. ಎಂದು ತಿಳಿದುಬಂದಿದೆ. ಈ ಪೈಕಿ, ರಿಲಯನ್ಸ್ ತನ್ನ ಅಂಗಸಂಸ್ಥೆಗಳೊಂದಿಗೆ ಸುಮಾರು 250 ಕೋಟಿ ರೂ. ಮೌಲ್ಯದ ಎಲೆಕ್ಟೋರಲ್ ಬಾಂಡ್ ಖರೀದಿ ಮಾಡಿದೆ ಎನ್ನಲಾಗಿದೆ. ನಾಲ್ಕನೇ ಹಂತದ ಎಲೆಕ್ಟೋರಲ್ ಬಾಂಡ್ ಖರೀದಿ ಜು.2ರಿಂದ 11ರವರೆಗೂ ನಡೆದಿದ್ದು, ಈ ಅಂಕಿ-ಅಂಶ ಇನ್ನೂ ಲಭ್ಯವಾಗಿಲ್ಲ.

1,200 ಕೋಟಿ ರೂ. ಮೊತ್ತದ ಎಲೆಕ್ಟೋರಲ್ ಬಾಂಡ್ ಬಗ್ಗೆ  ರಿಲಯನ್ಸ್ ಗ್ರೂಪ್ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದರಿಂದ  ಈ ಅನುಮಾನ ಇನ್ನೂ ಹೆಚ್ಚಾಗಿದೆ. ಆದರೆ, ಈ ಸಮೀಕ್ಷೆಯಿಂದ ಮತ್ತೊಂದು ಸಂಗತಿ ಬೆಳಕಿಗೆ ಬಂದಿದ್ದು, ಉಳಿದ ರಾಜಕೀಯ ಪಕ್ಷಗಳು ಸ್ವೀಕರಿಸುವ ಎಲೆಕ್ಟೋರಲ್ ಬಾಂಡ್ಗಳು ರಿಲಯನ್ಸ್ ಗ್ರೂಪ್ ನೀಡುವ ದೇಣಿಗೆಗಿಂತ ಹತ್ತುಪಟ್ಟು ಕಡಿಮೆ ಇರಲಿವೆ.

ಎಕನಾಮಿಕ್ ಟೈಮ್ಸ್’ ವರದಿ ಪ್ರಕಾರ, ಮೊದಲ ಹಂತವಾಗಿ 222 ಕೋಟಿ ರೂ. ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಲಾಗಿದೆ. ಈ ಬಾಂಡ್ಗಳು ಹಲವಾರು ರಾಜಕೀಯ ಪಕ್ಷಗಳಿಗೆ ಹೋಗಿದೆ. ರಿಲಯನ್ಸ್ ಗ್ರೂಪ್ ಒಂದೇ ತನ್ನ ಅಂಗಸಂಸ್ಥೆಗಳೊಂದಿಗೆ 250 ಕೋಟಿ ರು. ಮೌಲ್ಯದ ಎಲೆಕ್ಟೋರಲ್ ಬಾಂಡ್ ಖರೀದಿಸಿದೆ ಎನ್ನಲಾಗುತ್ತಿದೆ.

‘ಇಂಡಿಯಾ ಟುಡೇ’ ವರದಿ ಹೇಳುವ ಹಾಗೆ, ಆರ್ಟಿಐ ಮಾಹಿತಿಯಂತೆ 2018ರ ಜೂ.21ರೊಳಗೆ ಮೊದಲ ಮೂರು ತಿಂಗಳಿನಲ್ಲಿ 213 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳು ಮುಂಬೈ ಕೇಂದ್ರಿತವಾಗಿ ರಾಜಕೀಯ ಪಕ್ಷಗಳಿಗೆ ಹರಿದುಬಂದಿವೆ. ಉಳಿದ ನಗರಗಳನ್ನು ಗಮನಿಸುವುದಾದರೆ, ದೆಹಲಿಯಿಂದ 73.6 ಕೋಟಿ ರೂ., ಕೊಲ್ಕತ್ತಾ ಮೂಲದಿಂದ 70.0 ಕೋಟಿ ರೂ., ಬೆಂಗಳೂರು ಮೂಲದಿಂದ 51,8 ಕೋಟಿ ರೂ., ಚೈನ್ನೈ ಮೂಲದಿಂದ 18.0 ಕೋಟಿ ರೂ., ಗಾಂಧಿನಗರದಿಂದ 12.0 ಕೋಟಿ ರೂ. ಮೌಲ್ಯದ ಎಲೆಕ್ಟೋರಲ್ ಬಾಂಡ್ ಗಳು ಖರೀದಿಯಾಗಿವೆ. ಈ ಬಾಂಡ್ ಖರೀದಿದಾರರ ವಿವರವನ್ನು ಆರ್ಟಿಐನಡಿ ನೀಡಲು ಎಸ್ಬಿಐ ನಿರಾಕರಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X