ಸಾಲ ತೀರಿಸಲು ಸರಗಳ್ಳತನ: ಸಾಫ್ಟ್‌ವೇರ್ ಇಂಜಿನಿಯರ್ ಬಂಧನ

ಬೆಂಗಳೂರು, ಜು.14: ಲಕ್ಷಗಟ್ಟಲೆ ಸಾಲವನ್ನು ಮಾಡಿ, ಅದನ್ನು ತೀರಿಸಲು ಸರಗಳ್ಳತನಕ್ಕೆ ಇಳಿದ್ದಿದ್ದ ಖಾಸಗಿ ಕಂಪನಿಯ ಮಾಲಕನಾಗಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಬಂಧಿಸುವಲ್ಲಿ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶ ಮೂಲದ ಪರಪ್ಪನ ಅಗ್ರಹಾರದಲ್ಲಿ ವಾಸವಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾಕರ್(35) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನು ಕಳವು ಮಾಡಿದ್ದ ಸರಗಳನ್ನು ವಶಪಡಿಸಿಕೊಳ್ಳಲು ತನಿಖೆ ತೀವ್ರಗೊಳಿಸಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.
ಆರೋಪಿಯು ಖಾಸಗಿ ಕಂಪನಿ ಮಾಡಲು 10 ಲಕ್ಷದವರೆಗೆ ಸಾಲ ಮಾಡಿದ್ದ. ಆದರೆ ಕಂಪನಿಯಲ್ಲಿ ನಷ್ಟ ಉಂಟಾಗಿ ಸಾಲ ಕೊಟ್ಟವರು ವಾಪಸ್ ನೀಡುವಂತೆ ಒತ್ತಡ ಹೇರಿದ್ದರು. ಹೀಗಾಗಿ ಸಾಲ ತೀರಿಸುವ ಸಲುವಾಗಿ ಸರಗಳ್ಳತನಕ್ಕೆ ಇಳಿದಿದ್ದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಜೆಪಿನಗರ, ಜಯನಗರ ಇನ್ನಿತರ ಕಡೆಗಳಿಂದ ಹಲವು ದಿನಗಳಿಂದ ಸುತ್ತಾಡಿ ಇಲ್ಲಿವರೆಗೆ ಸುಮಾರು 20ಕ್ಕೂ ಹೆಚ್ಚು ಸರಕಳವು ಮಾಡಿ ಸುಮಾರು 10 ಲಕ್ಷ ರೂ.ಸಾಲ ತೀರಿಸಿದ್ದನು. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸರಗಳವು ಪ್ರಕರಣ ಹೆಚ್ಚಾಗುತ್ತಿದಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪ್ರತಿ ವಾಹನಗಳನ್ನು ತಪಾಸಣೆ ನಡೆಸಿದಾಗ ಆರೋಪಿ ಸಿಕ್ಕಿ ಬಿದಿದ್ದಾನೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.







