ಮಟ್ಕಾ ಜುಗಾರಿ: ಆರು ಮಂದಿ ಬಂಧನ
ಉಡುಪಿ, ಜು.14: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಜುಗಾರಿ ಆಟಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜು.14ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಸ್ತಾನದ ಮೀನು ಮಾರ್ಕೆಟ್ ಬಳಿ ರಾಜಾರಾಮ ಭಟ್, ಜು.13ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಂಬಳ್ಳಿ ಗ್ರಾಮದ ಕೀರ್ತಿ ಹೋಟೆಲ್ ಬಳಿ ಹೇರೂರು ಕೊಳಂಬೆಯ ಗಂಗಾಧರ(65) ಮತ್ತು ಬ್ರಹ್ಮಾವರ ಬಳಿ ಪೇತ್ರಿಯ ರೋಕಿ ಡಿಸೋಜ (54), ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಜಗೋಳಿ ಪೇಟೆಯಲ್ಲಿ ಬಜಗೋಳಿಯ ಸಂದೀಪ್ ಶೆಟ್ಟಿ(32), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರೂರು ಗ್ರಾಮದ ನಂದಿನಿ ಹೋಟೇಲ್ ಬಳಿ ಕೋಣಿಯ ರಾಘವೇಂದ್ರ ಮಡಿವಾಳ(46), ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಂದುರು ಗ್ರಾಮದ ಜೋಡುರಸ್ತೆಯ ಬಳಿ ತೆಳ್ಳಾರಿನ ಪ್ರಕಾಶ್(42) ಎಂಬವರನ್ನು ಬಂಧಿಸಿರುವ ಪೊಲೀಸರು ನಗದು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





