ಉಚ್ಚಿಲ: ತೀವ್ರಗೊಂಡಿರುವ ಕಡಲ್ಕೊರೆತ

ಉಳ್ಳಾಲ, ಜು. 14: ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತವು ತೀವ್ರಗೊಂಡಿದ್ದು, ತೀವ್ರ ಗಾತ್ರದ ಅಲೆಗಳು ತೀರಕ್ಕೆ ಅಪ್ಪಲಿಸುತ್ತಿವೆ. ಸಮುದ್ರದ ಅಲೆಗಳ ಅಬ್ಬರದಿಂದಾಗಿ ಹಲವಾರು ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳೂ ಉರುಳಿ ಬಿದ್ದಿದೆ. ಅಲ್ಲದೆ ಈ ಭಾಗದ ಹಲವಾರು ಮನೆಗಳು ಕೂಡಾ ಅಪಾಯದಂಚಿನಲ್ಲಿವೆ.
ಉಚ್ಚಿಲ ಪೆರರಬೈಲ್ ಪ್ರದೇಶಲ್ಲಿ ಕಡಲ್ಕೊರೆತದಿಂದಾಗಿ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದಿವೆ. ಬಿದ್ದಿರುವ ವಿದ್ಯುತ್ ಕಂಬಗಳನ್ನು ಮೆಸ್ಕಾಂ ಸಿಬ್ಬಂದಿಗಳು ಬದಲಾಯಿಸುವ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಸಮುದ್ರ ಕೊರೆತದ ಸ್ಥಳಕ್ಕೆ ಸೋಮಶ್ವರ ಗ್ರಾಮ ಪಂ. ಅಧ್ಯಕ್ಷ ರಾಜೇಶದ ಉಚ್ಚಿಲ್, ಜಿಲ್ಲಾ ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ಉಳ್ಳಾಲ ನಗರ ಸಭೆ ಪೌರಾಯುಕ್ತೆ ವಾಣಿ ವಿ.ಆಳ್ವ, ನಗರಸಭೆ ಸದಸ್ಯ ಮುಹಮ್ಮದ್ ಮುಕ್ಕಚ್ಚೇರಿ ಮೊದಲಾದವರು ಭೇಟಿ ನೀಡಿ ಪರೀಶೀಲನೆ ನಡೆಸುತ್ತಿದ್ದಾರೆ.
Next Story





