ಅಕ್ರಮ ರಕ್ತ ಚಂದನ ಸಾಗಾಟ: ಮೂವರ ಬಂಧನ

ಬೆಂಗಳೂರು, ಜು.14: ಅಕ್ರಮವಾಗಿ ರಕ್ತಚಂದನ ಸಾಗಾಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ 872 ಕೆಜಿ ರಕ್ತ ಚಂದನ ಮರದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಕಾಡುಗೋಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಮದು ಬಿನ್ ಪೊನ್ನುಸ್ವಾಮಿ(37), ಪಳನಿ ಬಿನ್ ಮೂಗುತ್ಯಾನ್(40), ಪಳನಿ ಮುರುಗನ್ ಬಿನ್ ಸಡಯಾನ್(25) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಜು.13ರಂದು ಹೊಸಕೋಟೆ ರಸ್ತೆಯ ಖಾಜಿಸೊಣ್ಣೇನಹಳ್ಳಿಯಲ್ಲಿ ಇನ್ನೋವಾ ಕಾರಿನಲ್ಲಿ ರಕ್ತಚಂದನವನ್ನು ಸಾಗಿಸಿಕೊಂಡು ಬರುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾಡುಗೋಡಿ ಠಾಣೆಯ ಇನ್‌ಸ್ಪೆಕ್ಟರ್ ಚನ್ನೇಶ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





