ಜಗತ್ತಿನ ಅತಿ ದೊಡ್ಡ ವೀಸಾ ಕೇಂದ್ರ ಉದ್ಘಾಟಿಸಿದ ರಾಜ್‌ನಾಥ್ ಸಿಂಗ್

ಢಾಕಾ (ಬಾಂಗ್ಲಾದೇಶ), ಜು. 14: ಆಧುನಿಕ ಸವಲತ್ತುಗಳುಳ್ಳ ಜಗತ್ತಿನ ಅತಿ ದೊಡ್ಡ ಅತ್ಯಾಧುನಿಕ ವೀಸಾ ಕೇಂದ್ರವನ್ನು ಭಾರತದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಶನಿವಾರ ಇಲ್ಲಿ ಉದ್ಘಾಟಿಸಿದರು. ಈ ಕೇಂದ್ರವು ವೀಸಾ ಅರ್ಜಿದಾರರ ಕಾಯುವಿಕೆ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ರಾಜ್‌ನಾಥ್ ಸಿಂಗ್ ಮತ್ತು ಬಾಂಗ್ಲಾದೇಶದ ಗೃಹ ಸಚಿವ ಅಸದುಝ್ಝಮಾನ್ ಖಾನ್ ಕಮಲ್ ಜೊತೆ ಜಮುನಾ ಫ್ಯೂಚರ್ ಪಾರ್ಕ್ (ಜೆಎಫ್‌ಪಿ)ನಲ್ಲಿ ವೀಸಾ ಕೇಂದ್ರವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಭಾರತೀಯ ಹೈಕಮಿಶನರ್ ಹರ್ಷವರ್ಧನ್ ಶ್ರಿಂಗಾಲ, ‘‘ಇದು ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಭಾರತೀಯ ವೀಸಾ ಕೇಂದ್ರ ಹಾಗೂ ಬಹುಶಃ ಯಾವುದೇ ದೇಶದ ಜಗತ್ತಿನ ಅತ್ಯಂತ ದೊಡ್ಡ ವೀಸಾ ಕೇಂದ್ರವಾಗಿರಲೂ ಬಹುದು’’ ಎಂದು ಹೇಳಿದರು.
ಮೋತಿಝೀಲ್ ಮತ್ತು ಉತ್ತಾರದಲ್ಲಿರುವ ವೀಸಾ ಕೇಂದ್ರಗಳ ಬದಲಿಗೆ ನೂತನ ಕೇಂದ್ರವು ಜುಲೈ 15ರಿಂದ ಕಾರ್ಯನಿರ್ವಹಿಸುತ್ತದೆ.
Next Story





