ಇಸ್ರೇಲ್ ಗಡಿಯಲ್ಲಿ ಘರ್ಷಣೆ: ಫೆಲೆಸ್ತೀನ್ ಬಾಲಕನ ಹತ್ಯೆ

ಗಾಝಾ ಸಿಟಿ, ಜು. 14: ಗಾಝಾ-ಇಸ್ರೇಲ್ ಗಡಿಯಲ್ಲಿ ಶುಕ್ರವಾರ ಘರ್ಷಣೆಗಳು ನಡೆದ ಬೆನ್ನಿಗೇ ಶನಿವಾರ ಮುಂಜಾನೆ ಗಾಝಾ ಪಟ್ಟಿಯಲ್ಲಿರುವ ಹಮಾಸ್ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ವಾಯು ದಾಳಿ ನಡೆಸಿದೆ.
ಶುಕ್ರವಾರ ಗಡಿಯಲ್ಲಿ ಸಂಭವಿಸಿದ ಘರ್ಷಣೆಯ ವೇಳೆ, ಓರ್ವ ಫೆಲೆಸ್ತೀನ್ ಬಾಲಕನನ್ನು ಇಸ್ರೇಲ್ ಸೈನಿಕರು ಗುಂಡು ಹಾರಿಸಿ ಕೊಂದಿದ್ದಾರೆ ಹಾಗೂ ಓರ್ವ ಇಸ್ರೇಲ್ ಸೈನಿಕ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಗಾಝಾ ಗಡಿಯಲ್ಲಿ ಶುಕ್ರವಾರ ಸಂಭವಿಸಿದ ಘರ್ಷಣೆಯಲ್ಲಿ 220 ಫೆಲೆಸ್ತೀನಿಯರು ಗಾಯಗೊಂಡಿದ್ದಾರೆ ಎಂದು ಗಾಝಾ ಪಟ್ಟಿಯ ಆರೋಗ್ಯ ಸಚಿವಾಲಯ ತಿಳಿಸಿದೆ.
Next Story





