ರೇಸ್ ಕೋರ್ಸ್ ಸ್ಥಳಾಂತರ ವಿಚಾರ: ಯದುವೀರ್ ಹೇಳಿಕೆಗೆ ಸಚಿವ ಸಾ.ರಾ.ಮಹೇಶ್ ತಿರುಗೇಟು

ಮೈಸೂರು,ಜು.14: ರೇಸ್ ಕೋರ್ಸ್ ಒಳಗಡೆ ಎಂತಹ ಪರಿಸ್ಥಿತಿ ಇದೆ ಎಂದು ಒಳಗಡೆ ಹೋಗಿ ನೋಡಿಕೊಂಡು ಬರಲಿ ಎಂದು ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣರಾಜ ಒಡೆಯರ್ ಅವರಿಗೆ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೇಸ್ ಕೋರ್ಸ್ ಸ್ಥಳಾಂತರ ಬೇಡ ಎಂದು ಹೇಳಿಕೆ ನೀಡಿದ್ದ ಯದುವೀರ್ ವಿರುದ್ದ ಬೇಸರ ವ್ಯಕ್ತಪಡಿಸಿದರು.
ರೇಸ್ ಕೋರ್ಸ್ ಸ್ಥಳಾಂತರ ಬೇಡ ಎಂದು ಹೇಳುವ ಮುನ್ನ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಮಾತನಾಡಲಿ. ರೇಸ್ ಕೋರ್ಸ್ ಆಡಳಿತ ಮಂಡಳಿ ಸರಕಾರಕ್ಕೆ ಹಣ ಕಟ್ಟದೆ ಮೋಸ ಮಾಡಿದೆ. ಅಲ್ಲಿನ ಆಡಳಿತ ಮಂಡಳಿ ಅಲ್ಲಿ ಏನು ಮಾಡುತ್ತಿದೆ ಎಂಬುದನ್ನು ಹೋಗಿ ನೋಡಲಿ. ಅದು ಬಿಟ್ಟು ಈ ರೀತಿಯ ಹೇಳಿಕೆಗಳು ಸರಿಯಲ್ಲ ಎಂದು ಹೇಳಿದರು.
Next Story





