ಪಿ.ಎ.ಮೊಯ್ದಿನ್ರಿಗೆ ಬಿಎಸ್ಎಫ್ ಸಹಾಯಕ ಕಮಾಂಡೆಂಟ್ ಆಗಿ ಭಡ್ತಿ

ಪಡುಬಿದ್ರೆ, ಜು.16: ಬಿಎಸ್ಎಫ್ ಪಡೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಪಡುಬಿದ್ರೆಯ ಪಿ.ಎ.ಮೊಯ್ದಿನ್ ಅವರು ಸಹಾಯಕ ಕಮಾಂಡೆಂಟ್ ಭಡ್ತಿ ಹೊಂದಿದ್ದಾರೆ.
ಸುಮಾರು 30 ವರ್ಷಗಳಿಂದ ಅಸ್ಸಾಂ, ಕಾಶ್ಮೀರ, ಪಂಜಾಬ್, ದಿಲ್ಲಿ, ಗುವಾಹಟಿ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿರುವ ಪಿ.ಎ.ಮೊಯ್ದಿನ್ ಅವರು ಸಹಾಯಕ ಕಮಾಂಡೆಂಟ್ ಆಯ್ಕೆ ಭಡ್ತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story