ಮಹಿಳೆಯ ಅತ್ಯಾಚಾರ, ಸಜೀವ ದಹನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಸಂಭಾಲ್, ಜು. 16: ಸಂಭಾಲ್ ಜಿಲ್ಲೆಯ ರಾಜಪುರ ಪ್ರದೇಶದಲ್ಲಿ ಮಹಿಳೆಯೋರ್ವಳ ಅತ್ಯಾಚಾರ ಎಸಗಿ ಜೀವಂತ ದಹಿಸಿದ ಪ್ರಕರಣದ ಐವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಮನೆಯಲ್ಲಿ ಐವರು ಅತ್ಯಾಚಾರ ಎಸಗಿ ಅನಂತರ ಆಕೆಯನ್ನು ದೇವಾಲಯದ ಯಾಗ ಕುಂಡದಲ್ಲಿ ಹಾಕಿ ಜೀವಂತವಾಗಿ ದಹಿಸಿದ ಘಟನೆ ಶನಿವಾರ ಸಂಭವಿಸಿತ್ತು. ‘‘ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆರಾಮ್ ಸಿಂಗ್ ಹಾಗೂ ಭೋನಾ ಆಲಿಯಾಸ್ ಕುನ್ವರ್ ಪಾಲ್ ನನ್ನು ಬಂಧಿಸಲಾಗಿದೆ. ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ. ನಾಲ್ಕು ಪೊಲೀಸ್ ತಂಡಗಳನ್ನು ರೂಪಿಸಲಾಗಿದೆ ಹಾಗೂ ಇತರ ಮೂವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ’’ ಎಂದು ಪೊಲೀಸ್ ಅಧಿಕ್ಷಕ ಆರ್. ಎಂ. ಭಾರದ್ವಾಜ್ ತಿಳಿಸಿದ್ದಾರೆ. ಆರೋಪಿಗಳು ಮಹಿಳೆಯರ ಸಂಬಂಧಿಕರು ಎಂದು ಗುನ್ನೌರ್‌ನ ಸರ್ಕಲ್ ಅಧಿಕಾರಿ ಅಖೀಲ್ ಅಹ್ಮದ್ ತಿಳಿಸಿದ್ದಾರೆ.
Next Story





