ಕಾಶ್ಮೀರ: ಗಡಿ ನುಸುಳಲು ಯತ್ನಿಸಿದ್ದ ಓರ್ವ ಉಗ್ರ ಹತ

ಶ್ರೀನಗರ, ಜು. 16: ಜಮ್ಮು ಹಾಗೂ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಸೋಮವಾರ ಒಳನುಸುಳವಿಕೆಯನ್ನು ವಿಫಲಗೊಳಿಸಿರುವ ಗಡಿ ಭದ್ರತಾ ಪಡೆ ಉಗ್ರನನ್ನು ಹತ್ಯೆಗೈದಿದೆ. ಕುಪ್ವಾರ ಜಿಲ್ಲೆಯ ಸಫ್‌ವಾಲಿ ಗಾಲ್‌ನಲ್ಲಿ ಗಡಿ ನುಸುಳ ಪ್ರಯತ್ನಿಸುತ್ತಿದ್ದ ಉಗ್ರರ ಮೇಲೆ ಭದ್ರತಾ ಪಡೆ ಗುಂಡು ಹಾರಿಸಿತು. ಪರಿಣಾಮವಾಗಿ ಓರ್ವ ಉಗ್ರ ಹತನಾದ. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡರು. ಹತ ಉಗ್ರನಲ್ಲಿ ಒಂದು ಎ.ಕೆ. 47 ರೈಫಲ್ ಪತ್ತೆಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
Next Story





