ಬರೋಬ್ಬರಿ 292 ಮೊಸಳೆಗಳನ್ನು ಹೊಡೆದು ಕೊಂದ ಗುಂಪು

ಇಂಡೋನೇಷ್ಯಾ, ಜು.16: ಸ್ಥಳೀಯ ವ್ಯಕ್ತಿಯೊಬ್ಬರನ್ನು ಮೊಸಳೆಯೊಂದು ಕೊಂದದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಫಾರ್ಮ್ ಒಂದರಲ್ಲಿದ್ದ ಸುಮಾರು 292 ಮೊಸಳೆಗಳನ್ನು ಕೊಂದು ಹಾಕಿರುವ ಘಟನೆ ಇಂಡೋನೇಷ್ಯಾದ ಪಪುವಾ ಎಂಬಲ್ಲಿ ನಡೆದಿದೆ.
ಹುಲ್ಲಿಗಾಗಿ ಹೊಲಕ್ಕೆ ತೆರಳಿದ್ದ 48 ವರ್ಷದ ವ್ಯಕ್ತಿಯೊಬ್ಬರನ್ನು ಮೊಸಳೆಯೊಂದು ಕೊಂದು ಹಾಕಿತ್ತು. ಈ ವ್ಯಕ್ತಿಯ ಅಂತ್ಯಕ್ರಿಯೆಯ ಬಳಿಕ ಗ್ರಾಮಸ್ಥರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಹಾಗು ನೂರಾರು ಸ್ಥಳೀಯರು ಮೊಸಳೆ ಫಾರ್ಮ್ ಗೆ ತೆರಳಿದ್ದಾರೆ. ಮೃತನ ಕುಟುಂಬಕ್ಕೆ ಮೊಸಳೆ ಫಾರ್ಮ್ ನಡೆಸುತ್ತಿದ್ದ ವ್ಯಕ್ತಿ ಪರಿಹಾರ ನೀಡುತ್ತಾನೆ ಎಂದು ಪೊಲೀಸರು ಮನವೊಲಿಸಿದ್ದರು. ಆದರೆ ಇದಕ್ಕೊಪ್ಪದ ಗುಂಪು ಫಾರ್ಮ್ ಗೆ ದೊಣ್ಣೆ, ಕತ್ತಿಗಳು, ಕೊಡಲಿಗಳೊಂದಿಗೆ ತೆರಳಿ 292 ಮೊಸಳೆಗಳನ್ನು ಹೊಡೆದು ಕೊಂದಿದ್ದಾರೆ. ಇದರಲ್ಲಿ ಸಣ್ಣ ಮರಿಗಳೂ ಸೇರಿತ್ತು ಎನ್ನಲಾಗಿದೆ.
Next Story





