ಮನ್-ಶರ್ ನ್ಯೂಬಿ ಪ್ರೀ ಸ್ಕೂಲ್ ನಲ್ಲಿ 'ವೈಟ್ ಡೇ' ಸಂಭ್ರಮ

ಬೆಳ್ತಂಗಡಿ, ಜು. 16: ಮನ್-ಶರ್ ನ್ಯೂಬಿ ಪ್ರೀ ಸ್ಕೂಲ್ ನಲ್ಲಿ 'ವೈಟ್ ಡೇ' ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬಿಳಿ ವಸ್ತ್ರದಾರಿಗಳಾಗಿ ಬಂದ ಪುಟ್ಟ ಮಕ್ಕಳು ಆಕರ್ಷಣೆಯ ಕೇಂದ್ರ ಬಿಂದುವಾದರು. ತರಗತಿಗಳು ಬಿಳಿ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ಮಕ್ಕಳಿಗೆ ಬಿಳಿ ಬಣ್ಣಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನ ಏರ್ಪಡಿಲಾಯಿತು.
ಕಾರ್ಯಕ್ರಮದಲ್ಲಿ ಮನ್-ಶರ್ ಗ್ರೂಪ್ ಚೆಯರ್ಮ್ಯಾನ್ ಹಾಗೂ ಮ್ಯಾನೇಜಿಂಗ್ ಡೈರಕ್ಟರ್ ಸೈಯದ್ ಉಮರ್ ಅಸ್ಸಖಾಫ್, ಮ್ಯಾನೇಜರ್ ಸೈಯದ್ ಆಬಿದ್ ಅಸ್ಸಖಾಫ್, ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಅಕಾಡಮಿಕ್ ಡೈರಕ್ಟರ್ ವಸಂತ್ ಕುಮಾರ್ ನಿಟ್ಟೆ ಭಾಗವಹಿಸಿ ಶುಭಹಾರೈಸಿದರು.
Next Story





