ಅಮೆರಿಕಾದಲ್ಲಿ ತೆಂಕುತಿಟ್ಟು ಯಕ್ಷಗಾನ
ಮಂಗಳೂರು, ಜು.16: ಮೂಡುಬಿದಿರೆಯ ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ಸಂಸ್ಥೆಯು ಸಂಯೋಜಿಸಿರುವ ಕಲಾತಂಡವು ಅಮೆರಿಕಾದ ವಿವಿಧ ಕಡೆಗಳಲ್ಲಿ ಅಲ್ಲಿಯ ಕೆಲವು ಹಿಂದೂ ದೇವಾಲಯ ಹಾಗೂ ಕನ್ನಡ ಸಂಘಟಗಳ ಆಶ್ರಯದಲ್ಲಿ ಆಗಸ್ಟ್ 20ರವರೆಗೆ ಮಹಿಷ ಮರ್ದಿನಿ ಶ್ರೀದೇವಿ ಮಹಾತ್ಮೆ ಸುಧ್ವನ ಕಾಳಗ ಮೊದಲಾದ ಪ್ರಸಂಗಗಳನ್ನು ನೀಡುವುದರೊಂದಿಗೆ ಯಕ್ಷಗಾನ ತಾಳಮದ್ದಳೆಗಳನ್ನು ಕೂಡಾ ಪ್ರಸ್ತುತ ಪಡಿಸಲಿದೆ.
ಈ ತಂಡವು ಕಲಾವಿದರಾದ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ ಎಂ., ದೇವಾನಂದ ಭಟ್ ಬೆಳುವಾಯಿ,ಎಂ.ಎಲ್ ಸಾಮಗ, ಚಂದ್ರ ಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಮೋಹನ್ ಬೆಳ್ಳಿಪಾಡಿ ಹಾಗೂ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅವರನ್ನು ಒಳಗೊಂಡಿದೆ. ಎಂದು ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಮುಖ್ಯಸ್ಥ ದೇವಾನಂದ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





