ಪ್ರಧಾನಿ ರ‍್ಯಾಲಿಯಲ್ಲಿ ಕುಸಿದ ಟೆಂಟ್
ಕೋಲ್ಕತಾ: ಪಶ್ಚಿಮ ಬಂಗಾಲದ ಮಿಡ್ನಾಪೋರ್‌ನಲ್ಲಿ ರೈತರ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದ ಸಂದರ್ಭ ಟೆಂಟ್ ಕುಸಿದುಬಿದ್ದು 20 ಮಂದಿ ಗಾಯಗೊಂಡ ಘಟನೆ ನಡೆದಿದೆ. ಪ್ರಧಾನಿಯವರ ರ‍್ಯಾಲಿ ನಡೆಯುವ ವೇದಿಕೆಯ ಬಳಿ ಜನರಿಗೆ ಮಳೆಯಿಂದ ರಕ್ಷಣೆ ನೀಡಲು ಟೆಂಟ್ ನಿರ್ಮಿಸಲಾಗಿತ್ತು. ಭಾರೀ ಮಳೆಯ ಕಾರಣ ಟೆಂಟ್‌ನ ಕಂಬಗಳು ಅಸ್ಥಿರಗೊಂಡಿದ್ದು ಪ್ರಧಾನಿ ಭಾಷಣ ಆರಂಭಿಸುತ್ತಿದ್ದಂತೆಯೇ ಬಿಜೆಪಿ ಬೆಂಬಲಿಗರು ಬೃಹತ್ ಸಂಖ್ಯೆಯಲ್ಲಿ ಟೆಂಟ್ ಒಳಗೆ ಸೇರಿಕೊಂಡಿದ್ದರು. ಭಾಷಣದ ಮಧ್ಯೆ ಟೆಂಟ್ ಕುಸಿಯುತ್ತಿರುವುದನ್ನು ಕಂಡ ಪ್ರಧಾನಿ ಜನರನ್ನು ಎಚ್ಚರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





