ಹೌದಿ ಬಂಡುಕೋರರ ನೆಲೆಗೆ ನುಗ್ಗಿದ ಯಮನ್ ಸೇನೆ

ದುಬೈ, ಜು. 16: ಹೌದಿ ಬಂಡುಕೋರರೊಂದಿಗೆ ಭೀಕರ ಕಾಳಗ ನಡೆಸಿದ ಬೆನ್ನಿಗೇ, ಯಮನ್ ಸೇನೆಯು ಹಜ್ಜಾಜ್ ಪ್ರಾಂತದ ಹಿರನ್ ಜಿಲ್ಲೆಯತ್ತ ಮುಂದುವರಿದಿದೆ ಎಂದು ಸೌದಿ ಅರೇಬಿಯದ ಸರಕಾರಿ ಒಡೆತನದ ಟಿವಿ ಚಾನೆಲ್ ‘ಅಲ್-ಅಕ್ಬರಿಯ’ ವರದಿ ಮಾಡಿದೆ.
ಹಿರನ್ ಕಣಿವೆಯಲ್ಲಿ ನಡೆದ ತೀವ್ರ ಸಂಘರ್ಷದ ವೇಳೆ ಯಮನ್ ಸೇನೆಯು ಹಲವು ಆಯಕಟ್ಟಿನ ನೆಲೆಗಳನ್ನು ಬಂಡುಕೋರರಿಂದ ಮುಕ್ತಗೊಳಿಸಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಹರದ್ ಮತ್ತು ಹುದೈದಾದ ನಡುವಿನ ಆಯಕಟ್ಟಿನ ಕೊಂಡಿಯತ್ತ ಸೇನೆಯು ಮುನ್ನುಗ್ಗುತ್ತಿದೆ ಎಂದು ಹೇಳಿಕೆಯೊಂದರಲ್ಲಿ ಅವರು ಹೇಳಿದರು.
ಯುದ್ಧ ಈಗಲೂ ನಡೆಯುತ್ತಿದೆ ಹಾಗೂ ಹಲವಾರು ಬಂಡುಕೋರರು ಮೃತಪಟ್ಟಿದ್ದಾರೆ ಎಂದರು. ಇತರ ಬಂಡುಕೋರರು ರಾಜಧಾನಿ ಸನಾದತ್ತ ಪಲಾಯನಗೈದಿದ್ದಾರೆ ಎಂದರು.
Next Story





