ಎಸ್ಸೆಸ್ಸೆಫ್ ಉಡುಪಿ ವಿಭಾಗ ಮಟ್ಟದ ಸಬಲೀಕರಣ ಶಿಬಿರ
ಬ್ರಹ್ಮಾವರ, ಜು.17: ಎಸ್ಸೆಸ್ಸೆಫ್ ಉಡುಪಿ ವಿಭಾಗ ಮಟ್ಟದ ಸೆಕ್ಟರ್, ಶಾಖೆಗಳ ನಾಯಕರ ಸಬಲೀಕರಣ ಶಿಬಿರವು ಇತ್ತೀಚೆಗೆ ಬ್ರಹ್ಮಾವರ ಝೈಕಾ ಹೊಟೇಲ್ ಸಭಾಂಗಣದಲ್ಲಿ ಜರಗಿತು.
ಶಿಬಿರವನ್ನು ಎಸ್ಸೆಸ್ಸೆಫ್ ರಾಜ್ಯ ಸದಸ್ಯ ರವೂಫ್ ಖಾನ್ ಮೂಡುಗೋಪಾಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಡಿವಿಷನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಹದಿ ದೊಡ್ಡಣಗುಡ್ಡೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಶಬೀರ್ ಸಖಾಫಿ, ಶರೀಫ್ ಸಖಾಫಿ ನೇತೃತ್ವದಲ್ಲಿ ಸಬಲೀಕರಣ ಚರ್ಚಾ ಕೂಟ ನಡೆಯಿತು.
ಡಿವಿಷನ್ ನೂತನ ಉಸ್ತುವಾರಿಯಾಗಿ ಶರೀಫ್ ಸಖಾಪಿ ಉಚ್ಚಿಲ ಇವರನ್ನು ನೇಮಿಸಲಾಯಿತು. ಶಿಬಿರದಲ್ಲಿ ಡಿವಿಷನ್ ಉಪಾಧ್ಯಕ್ಷರಾದ ರಶೀದ್ ಉಸ್ತಾದ್, ಮಜೀದ್ ಕಟಪಾಡಿ, ಜೊತೆ ಕಾರ್ಯದರ್ಶಿಗಳಾದ ನವಾಝ್ ಉಡುಪಿ, ಶಾಹುಲ್ ದೊಡ್ಡಣಗುಡ್ಡೆ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಶರ್ವಾನಿ ಉಸ್ತಾದ್, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಇಮ್ತಿಯಾಝ್ ಹೊನ್ನಾಳ, ಮಣಿಪಾಲ ಸೆಕ್ಟರ್ ಉಪಾಧ್ಯಕ್ಷ ಸಿದ್ದೀಕ್ ಸಂತೋಷ ನಗರ, ಜಿಲ್ಲಾ ಸದಸ್ಯ ಶಂಶುದ್ದೀನ್, ಸಲ್ಮಾನ್ ಮಣಿಪುರ, ಬಿಲಾಲ್ ಮಲ್ಪೆ, ಡಿವಿಷನ್ ಗೌರವ ಸಲಹೆಗಾರರಾದ ಸಮದ್ ಮದನಿ ಸಾಸ್ತಾನ, ರಝಾಕ್ ಉಸ್ತಾದ್ ಅಂಬಾಗಿಲು ಮೊದಲಾದ ವರು ಉಪಸ್ಥಿತರಿದ್ದರು.
ಜಿಲ್ಲಾ ಜೊತೆ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಡಿವಿಷನ್ ಕೋಶಾಧಿಕಾರಿ ಇಬ್ರಾಹಿಂ ರಂಗನಕೆರೆ ಸ್ವಾಗತಿಸಿದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ನಝೀರ್ ಸಾಸ್ತಾನ ವಂದಿಸಿದರು.





