ನೈಟ್ ಕ್ಲಬ್-ಲೈವ್ ಬ್ಯಾಂಡ್‌ಗಳಿಗೆ ಕಡಿವಾಣ: ಪೊಲೀಸ್ ಆಯುಕ್ತ ಸುನೀಲ್ ಕುಮಾರ್

ಬೆಂಗಳೂರು, ಜು.17: ನಗರ ವ್ಯಾಪ್ತಿಯಲ್ಲಿ ರೆಕಾರ್ಡ್ ಮತ್ತು ಲೈವ್ ಮ್ಯೂಝಿಕ್ ಬಳಸುವ ಹೊಟೇಲ್, ರೆಸ್ಟೋರೆಂಟ್‌ಗಳಿಗೆ ನೋಟಿಸ್ ನೀಡಲಾಗಿದ್ದು, ಅನಧಿಕೃತವಾದ ನೈಟ್ ಕ್ಲಬ್ ಮತ್ತು ಲೈವ್‌ಬ್ಯಾಂಡ್‌ಗಳಿಗೆ ಕಡಿವಾಣ ಹಾಕಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯ ಹೊಟೇಲ್, ರೆಸ್ಟೋರೆಂಟ್, ಕ್ಲಬ್ ಗಳು ಸೇರಿ ಸುಮಾರು 400 ಸಂಸ್ಥೆಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಲೈವ್‌ಬ್ಯಾಂಡ್ ನಡೆಸುವ ಸಂಸ್ಥೆಗಳು ಪೂರ್ವಾನುಮತಿ ಪತ್ರ, ಬಿಬಿಎಂಪಿಯಿಂದ ಸ್ವಾಧೀನ ಪತ್ರಸೇರಿದಂತೆ ಸುಮಾರು ಐದಾರು ಪ್ರಮುಖ ದಾಖಲಾತಿಗಳನ್ನು ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಸುಪ್ರೀಂಕೋಟ್ ಆದೇಶದನ್ವಯ ಅಧಿಕೃತ ಪರವಾನಿಗೆ ನೀಡಲಾಗುವುದು. ಒಂದು ವೇಳೆ ಪರವಾನಿಗೆ ಇಲ್ಲದಿದ್ದರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
Next Story





