ವಿದ್ಯುತ್ ಆಘಾತ: ವ್ಯಕ್ತಿ ಮೃತ್ಯು
ಉಡುಪಿ, ಜು.17: ಮನೆಯೊಂದರಲ್ಲಿ ವಿದ್ಯುತ್ ಸಂಬಂಧಿಸಿದ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆಘಾತದಿಂದ ಮೃತಪಟ್ಟ ಘಟನೆ ಜು.16ರಂದು ಬೆಳಗ್ಗೆ ಅಂಬಲಪಾಡಿ ದೇವಳದ ಸಮೀಪ ನಡೆದಿದೆ.
ಮೃತರನ್ನು ಚಂದ್ರಶೇಖರ ಎಂದು ಗುರುತಿಸಲಾಗಿದೆ. ಇವರು ಅಂಬಲ ಪಾಡಿಯ ಬಿ.ಎಸ್.ನಾಯಕ್ ಎಂಬವವರ ಮನೆಯಲ್ಲಿ ವಿದ್ಯುತಗೆ ಸಂಬಂಧಿ ಸಿದ ಕೆಲಸಗಳನ್ನು ಮಾಡುತ್ತಿದ್ದಾಗ ವಿದ್ಯುತ್ ಅಪಘಾತದಿಂದ ಮೃತಪಟ್ಟಿರು ವುದಾಗಿ ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





