ಗುವಾಹಟಿ: ತೊಗಡಿಯಾ ಸಭೆಗಳಿಗೆ ನಿಷೇಧ
ಪ್ರಚೋದನಕಾರಿ ಭಾಷಣದಿಂದ ಅಲ್ಪಸಂಖ್ಯಾತರ ಭಾವನೆಗಳಿಗೆ ನೋವಾಗಬಹುದು ಎಂದ ಪೊಲೀಸರು

ಗುವಾಹಟಿ,ಜು.17: ಹೊಸದಾಗಿ ಸ್ಥಾಪನೆಯಾಗಿರುವ ಅಂತರರಾಷ್ಟ್ರೀಯ ಹಿಂದೂ ಪರಿಷದ್(ಎಎಚ್‌ಪಿ)ನ ಅಧ್ಯಕ್ಷ ಪ್ರವೀಣ್ ತೊಗಡಿಯಾ ಅವರು ಗುವಾಹಟಿಯಲ್ಲಿ ಸಭೆಗಳನ್ನು ನಡೆಸುವುದನ್ನು ಅಸ್ಸಾಂ ಪೊಲೀಸರು ನಿಷೇಧಿಸಿದ್ದಾರೆ.
ತೊಗಡಿಯಾರ ಪ್ರಚೋದನಕಾರಿ ಭಾಷಣಗಳು ರಾಜ್ಯದಲ್ಲಿಯ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಬಹುದು ಎಂದು ಪೊಲೀಸರು ಹೇಳಿದ್ದಾರೆ.
ಈ ವರ್ಷದ ಎಪ್ರಿಲ್‌ನಲ್ಲಿ ವಿಹಿಂಪನ್ನು ತೊರೆದಿರುವ ತೊಗಡಿಯಾ ಅವರು ಇಂದು ಜಿಲ್ಲೆಗೆ ಆಗಮಿಸಲಿದ್ದರು.ಮುಂದಿನ ಎರಡು ದಿನಗಳಲ್ಲಿ ಎಎಚ್‌ಪಿ ಸಭೆಗಳನ್ನು ಮತ್ತು ಸುದ್ದಿಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಲಿದ್ದರು. ಗುವಾಹಟಿ ಪೊಲೀಸ್ ಆಯುಕ್ತ ಹಿರೇನ್ ನಾಥ್ ಅವರು ಹೊರಡಿಸಿರುವ ಆದೇಶವು ಮುಂದಿನ ಎರಡು ತಿಂಗಳು ಜಾರಿಯಲ್ಲಿರುತ್ತದೆ.
Next Story





