ಇಸ್ರೇಲ್ ಸೈನಿಕರ ಗುಂಡಿಗೆ ಫೆಲೆಸ್ತೀನ್ ಯುವಕ ಬಲಿ
ಗಾಝಾ ಸಿಟಿ, ಜು. 17: ಕೆಲವು ದಿನಗಳ ಹಿಂದೆ ಗಾಝಾ ಗಡಿ ಸಮೀಪ ನಡೆದ ಘರ್ಷಣೆಯ ವೇಳೆ, ಇಸ್ರೇಲಿ ಸೈನಿಕರ ಗುಂಡೇಟಿನಿಂದ ಗಾಯಗೊಂಡಿದ್ದ 23 ವರ್ಷದ ಫೆಲೆಸ್ತೀನ್ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಗಾಝಾ ಪಟ್ಟಿಯ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಗಾಝಾ ಸಿಟಿಯಲ್ಲಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೆರುಸಲೇಮ್ಗೆ ಒಯ್ಯಲಾಗಿತ್ತು ಎಂದು ಹಮಾಸ್ ಆಡಳಿತದ ಭೂಭಾಗದ ಆರೋಗ್ಯ ಸಚಿವಾಲಯ ಹೇಳಿದೆ.
ಫೆಲೆಸ್ತೀನ್-ಇಸ್ರೇಲ್ ಗಡಿಯಲ್ಲಿ ಮಾರ್ಚ್ 30ರಂದು ನಿರಂತರ ಪ್ರತಿಭಟನೆಗಳು ಆರಂಭಗೊಂಡ ಬಳಿಕ, ಇಸ್ರೇಲ್ ಸೈನಿಕರ ಗುಂಡಿಗೆ ಕನಿಷ್ಠ 144 ಫೆಲೆಸ್ತೀನಿಯರು ಬಲಿಯಾಗಿದ್ದಾರೆ.
Next Story