ಶಿವಮೊಗ್ಗ: ಮಾರುತಿ ಓಮ್ನಿ- ಬೈಕ್ ಮುಖಾಮುಖಿ ಢಿಕ್ಕಿ; ಇಬ್ಬರು ಮೃತ್ಯು

ಶಿವಮೊಗ್ಗ, ಜು. 18: ಮಾರುತಿ ಓಮ್ನಿ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್‍ನಲ್ಲಿದ್ದ ಇಬ್ಬರು ಮೃತಪಟ್ಟು, ಕಾರಿನ ಚಾಲಕ ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಗೌಡನಕೆರೆ ರಸ್ತೆಯಲ್ಲಿ ನಡೆದಿದೆ.
ಬೈಕ್ ಚಾಲಕ ಗಿರೀಶ್ ಹಾಗೂ ಹಿಂಬದಿ ಸವಾರ ರಂಗಪ್ಪ ಮೃತಪಟ್ಟವರೆಂದು ಗುರುತಿಸಲಾಗಿದೆ. ಮಾರುತಿ ಓಮ್ನಿ ಚಾಲಕ ಬ್ಯಾಡಗಿಯ ಮಲ್ಲಿಕಾರ್ಜುನ ಶಿವಯೋಗಿಯವರು ಗಾಯಗೊಂಡವರಾಗಿದ್ದಾರೆ. ಮಾರುತಿ ಓಮ್ನಿ ಹಾಗೂ ಬೈಕ್ ಚಾಲಕರ ಅಜಾಗರೂಕ, ವೇಗದ ಚಾಲನೆಯೇ ಅವಘಡಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





