ಕಾಸರಗೋಡು : ಒಂದೂವರೆ ವರ್ಷದ ಮಗುವನ್ನು ಬಾವಿಗೆಸೆದ ತಾಯಿ
ಮಗು ಮೃತ್ಯು

ಕಾಸರಗೋಡು, ಜು. 18: ಒಂದೂವರೆ ವರ್ಷದ ಮಗುವನ್ನು ತಾಯಿ ಬಾವಿಗೆಸೆದು ಕೊಲೆಗೈದ ವಿಲಕ್ಷಣ ಘಟನೆ ನಗರ ಹೊರವಲಯದ ಎರಿಯಾಲ್ ನಲ್ಲಿ ಬುಧವಾರ ಸಂಜೆ ನಡೆದಿದೆ.
ಎರಿಯಾಲ್ ವೆಳ್ಳೂರಿನ ನಸೀಮಾ ಎಂಬಾಕೆ ತನ್ನ ಒಂದೂವರೆ ವರ್ಷದ ಪುತ್ರಿ ಶಮ್ನಾಳನ್ನು ಬಾವಿಗೆಸೆದಿದ್ದಾಳೆ ಎಂದು ತಿಳಿದುಬಂದಿದೆ.
ಸಂಜೆಯ ಸುಮಾರಿಗೆ ಮನೆ ಸಮೀಪದ ಖಾಸಗಿ ವ್ಯಕ್ತಿಯೋರ್ವರ ಹಿತ್ತಿಲಿನ ಬಾವಿಗೆಸೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮಗುವನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಮೃತಪಟ್ಟಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ನಸೀಮಾ ಮಾನಸಿಕ ಅಸ್ವಸ್ಥತೆ ಯಿಂದ ಬಳಲುತ್ತಿದ್ದು , ಇದರಿಂದ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಕಾಸರಗೋಡು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





