ಕೊಳ್ಳೇಗಾಲ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಸಚಿವ ಎನ್.ಮಹೇಶ್

ಕೊಳ್ಳೇಗಾಲ,ಜು.18: ಪಟ್ಟಣದ ವಿವಿಧೆಡೆ ನಗರಸಭೆಯ ವತಿಯಿಂದ 2016-17 ನೇ ಹಣಕಾಸಿನ ನಿಧಿಯಿಂದ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಉದ್ಘಾಟಿಸಿದರು.
ಪಟ್ಟಣದ ಮುಡಿಗುಂಡ, ಮಾರಿಗುಡಿ ದೇವಾಲಯ, ಆಟದ ಮೈದಾನ, ಪೊಲೀಸ್ ಕ್ವಾಟ್ರಸ್ ಹಾಗೂ ಲಯನ್ಸ್ ಶಾಲೆಯ ರಸ್ತೆಯಲ್ಲಿ ಬುಧವಾರ ನೂತನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಚಿವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಕ್ರಮ ವಹಿಸಲಾಗುವುದು. ಸಾರ್ವಜನಿಕರು ಶುದ್ಧ ಕುಡಿಯುವ ನೀರುನ್ನು ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ನೀರಿನ ಬಳಕೆಯೊಂದಿಗೆ ಘಟಕದ ಯಂತ್ರಗಳ ರೀಪೇರಿಯಾಗದಂತೆ ಬಳಸುವಂತೆ ಹೇಳಿದರು.
ಈ ಹಿಂದೆ ನಿರ್ಮಾಣವಾಗಿ ರಿಪೇರಿಯಾಗಿರುವ ಘಟಕಗಳ ಕೂಡಲೇ ಸರಿಪಡಿಸಿ ಸಾರ್ವಜನಿಕರ ಬಳಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಸದಸ್ಯರುಗಳು ಅನುದಾನವನ್ನು ನೀಡುವ ಮೂಲಕ ಮುಡಿಗುಂಡ ಬಡಾವಣೆಯ ಮುಖ್ಯರಸ್ತೆ ಕಾಮಗಾರಿ ಮಾಡೋಣ ಎಂದು ನೀಡಿದ ದೂರಿಗೆ ಸ್ಪಂದಿಸಿದರು.
ಈ ಸಂದರ್ಭ ನಗರಸಭೆ ಅಧ್ಯಕ್ಷ ಎಸ್.ರಮೇಶ್, ಉಪಾಧ್ಯಕ್ಷ ಶಿವಾನಂದ, ಸ್ಥಾಯಿಸಮಿತಿ ಅಧ್ಯಕ್ಷ ಹರ್ಷ, ಸದಸ್ಯರಾದ ರಂಗಸ್ವಾಮಿ, ಎ.ಪಿ.ಶಂಕರ್, ಪರಮೇಶ್ವರಯ್ಯ, ಸುಬ್ರಮಣ್ಯ, ಕೃಷ್ಣಯ್ಯ, ರಾಮಕೃಷ್ಣ, ಸೈಯದ್ ಕಲಿಂಉಲ್ಲಾ, ಪ್ರಭಾರ ಪೌರಾಯುಕ್ತ ಕೆ.ಸುರೇಶ್, ಎಇಇ ಗಂಗಾಧರ್, ಇಂಜಿನಿಯರ್ ನಟರಾಜು ಹಾಗೂ ಇನ್ನೀತರರು ಇದ್ದರು.







