ಕೆ.ಮಾಧವ ಉಳ್ಳಾಲಬೈಲ್ : ಶ್ರದ್ಧಾಂಜಲಿ

ಮಂಗಳೂರು, ಜು.18: ಸುಮಾರು 54 ವರ್ಷಗಳ ಕಾಲ ಮಂಗಳೂರಿನ ನ್ಯಾಯಾಲಯಗಳಲ್ಲಿ ದಿ.ಕೆ.ಮಾಧವ ಉಳ್ಳಾಲಬೈಲ್ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಮನಪಾ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ತಿಳಿಸಿದ್ದಾರೆ.
ಅವರು ನಗರದ ಸ್ಟೇಟ್‌ಬ್ಯಾಂಕ್ ಬಳಿ ಕ್ಯಾಪಿಟಲ್ ಅವೆನ್ಯೂ ಕಟ್ಟಡದಲ್ಲಿ ಜರುಗಿದ ದಿ.ಕೆ.ಮಾಧವ ಉಳ್ಳಾಲಬೈಲ್ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಮಂಗಳೂರು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್. ಬಲ್ಲಾಳ್, ನ್ಯಾಯ ವಾದಿಗಳಾದ ಈಶ್ವರ ಕೊಟ್ಟಾರಿ, ರಾಮ್ ಪ್ರಸಾದ್, ದಸ್ತಾವೇಜು ಬರಹಗಾರರಾದ ಎಂ.ಎಸ್. ಸರಪಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಪ್ರಮೋದ್ ಕುಮಾರ್, ಮೋಹನ್‌ದಾಸ್ ರೈ, ಮರಿಯ ಲವೀನಾ ಎಸ್. ವೇಗಸ್, ಮಾಜಿ ತಾಪಂ ಸದಸ್ಯ ಎನ್.ಇ. ಮುಹಮ್ಮದ್ ಉಪಸ್ಥಿತರಿದ್ದರು.
ಅಹಿಂದ ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





